ಹುಬ್ಬಳ್ಳಿ: ಕೊರೊನಾ ತಗುಲಿದರೆ ಭಯ ಬೇಡ, ಧೈರ್ಯದಿಂದ ಇರಬೇಕು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ವೈದ್ಯರ ಸಲಹೆ ಪಡೆಯಿರಿ ಎಂದು ಸೋಂಕಿನಿಂದ ಗುಣಮುಖರಾಗಿ ಬಂದ ಪಾಲಿಕೆ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಕೊರೊನಾ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಿ, ಕೊರೊನಾ ಬಂದ ತಕ್ಷಣವೇ ಎಲ್ಲರೂ ಭಯ ಬೀಳುತ್ತಿದ್ದಾರೆ. ಕೊರೊನಾ ಬಗ್ಗೆ ಅಸಡ್ಡೆ ತೋರಿಸದೇ ಜಾಗೃತಿಯಿಂದ ಇರಬೇಕು ಎಂದರು.