ಕರ್ನಾಟಕ

karnataka

ETV Bharat / state

ಕೊರೊನಾ ಬಗ್ಗೆ ಭಯ ಬೇಡ, ಜಾಗೃತಿ ಇರಲಿ: ಸಿ.ಎಂ.ನಿಂಬಣ್ಣವರ - ಧಾರವಾಡ ಕೊರೊನಾ ಜಾಗೃತಿ

ಅಳ್ನಾವರ ತಾಲೂಕಿನಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ದಾಖಲಾಗಿದ್ದು, ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಹಾಗಾಗಿ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದ್ದಾರೆ.

Nimbannavar
Nimbannavar

By

Published : Jul 25, 2020, 3:18 PM IST

ಅಳ್ನಾವರ: ಸಮಾಜಕ್ಕೆ ಆವರಿಸಿರುವ ಕೊರೊನಾ ಸೋಂಕಿನ ಬಗ್ಗೆ ಭಯ ಬೇಡ. ಸರ್ಕಾರದ ನಿರ್ದೇಶನಗಳನ್ನು ಸರಿಯಾಗಿ ಪಾಲಿಸಿ ಎಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು.

ಪಟ್ಟಣ ಪಂಚಾಯತ್ ಸಭಾಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾವನ್ನು ಧೈರ್ಯದಿಂದ ಎದುರಿಸೋಣ. ಈ ಸೋಂಕಿನಿಂದ ಸಾವು ಸಂಭವಿಸುವುದು ತೀರಾ ವಿರಳ ಎಂದರು.

ಅಳ್ನಾವರ ಭಾಗದಲ್ಲಿ ಅಧಿಕಾರಿಗಳು ಕೈಗೊಂಡ ಕಠಿಣ ಕ್ರಮಗಳ ಫಲವಾಗಿ ಕೊರೊನಾ ತಡೆಯಲು ಸಹಕಾರಿಯಾಗಿದೆ. ನಮ್ಮ ತಾಲೂಕು ಸುರಕ್ಷಿತವಾಗಿದ್ದು, ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ದಾಖಲಾಗಿದ್ದು, ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಜನರು ಒಳ್ಳೆಯ ಹವ್ಯಾಸ ರೂಢಿಸಿಕೊಂಡು ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಈ ವೇಳೆ ತಹಶೀಲ್ದಾರ್ ಅಮರೇಶ ಪಮ್ಮಾರ, ಪಿಎಸ್​​ಐ ಎಸ್.ಆರ್.ಕಣವಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜಿ.ಗದ್ದಿಗೌಡರ, ಉಪ ತಹಶೀಲ್ದಾರ್ ಶಿವಾನಂದ ಹೆಬ್ಬಳ್ಳಿ, ನೇತ್ರಾವತಿ ಕಡಕೋಳ, ಶಾಲೆಟ್ ಬೆರೆಟ್ಟೊ, ರಮೇಶ ಕುನ್ನೂರಕರ, ಮಧುಸೂದನ ಮುಂತಾದವರು ಉಪಸ್ಥಿತರಿದ್ದರು.

ABOUT THE AUTHOR

...view details