ಧಾರವಾಡ:ಮೈಸೂರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಿಗೆ ಬೆಳ್ಳಿ ಕವಚ ತಯಾರಿಸಿ ಒಪ್ಪಿಸಿದ್ದಾರೆ. ಧಾರವಾಡದ ಕಲಾವಿದ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಭಕ್ತರು ಸೇರಿಕೊಂಡು ಬೆಳ್ಳಿ ಕವಚ ಮಾಡಿಸಿದ್ದಾರೆ.
ಮೈಸೂರು ಭುವನೇಶ್ವರಿ ದೇವಿಗೆ ಧಾರವಾಡದಿಂದ 12 ಕೆ.ಜಿ ಬೆಳ್ಳಿ ಕವಚ ಕೊಡುಗೆ - mysuru dasara 20203
12 ಕೆ.ಜಿ ಬೆಳ್ಳಿ ಬಳಸಿಕೊಂಡು 6 ತಿಂಗಳಲ್ಲಿ ಕವಚ ನಿರ್ಮಾಣ ಮಾಡಲಾಗಿದೆ. ಕಲಾವಿದ ನವೀನ್ ಅವರ ಜೊತೆಗೆ ಸಚಿನ್ ಕಡ್ಲಾಸ್ಕರ್, ನಿಖಿಲ್ ಸೂಳಿಬಾವಿ ಹಾಗೂ ಗಣೇಶ್ ಸಾವಗಾವ್ ಎಂಬುವವರು ಕೆಲಸ ಮಾಡಿದ್ದಾರೆ. ಇಂತಹ ಅನೇಕ ಮೂರ್ತಿಗಳನ್ನು ನವೀನ್ ಕಡ್ಲಾಸ್ಕರ ತಯಾರಿಸಿದ್ದಾರೆ.
ಮೈಸೂರು ಭುವನೇಶ್ವರಿ ದೇವಿಗೆ ಧಾರವಾಡದಿಂದ 12 ಕೆಜಿ ಬೆಳ್ಳಿ ಕವಚ ಕೊಡುಗೆ
12 ಕೆ.ಜಿ ಬೆಳ್ಳಿ ಬಳಸಿಕೊಂಡು 6 ತಿಂಗಳಲ್ಲಿ ಕವಚ ನಿರ್ಮಾಣ ಮಾಡಲಾಗಿದೆ. ಕಲಾವಿದ ನವೀನ್ ಅವರ ಜೊತೆಗೆ ಸಚಿನ್ ಕಡ್ಲಾಸ್ಕರ್, ನಿಖಿಲ್ ಸೂಳಿಬಾವಿ ಹಾಗೂ ಗಣೇಶ್ ಸಾವಗಾವ್ ಎಂಬುವವರು ಕೆಲಸ ಮಾಡಿದ್ದಾರೆ. ಇಂತಹ ಅನೇಕ ಮೂರ್ತಿಗಳನ್ನು ನವೀನ್ ಕಡ್ಲಾಸ್ಕರ ತಯಾರಿಸಿದ್ದು, ಸುತ್ತಮುತ್ತಲಿನ ಹಲವು ಜಿಲ್ಲೆಗಳಿಗೆ ಬೇಕಾದ ಮೂರ್ತಿಗಳನ್ನು ಇವರೇ ನಿರ್ಮಿಸಿ ಕೊಡುತ್ತಾರೆ.
ಸುಮಾರು 15-20 ವರ್ಷದಿಂದ ಈ ವೃತ್ತಿ ಮಾಡಿಕೊಂಡು ಬಂದಿರುವ ನವೀನ್, ಇದೀಗ ಬೆಳ್ಳಿಯಲ್ಲಿ ಭುವನೇಶ್ವರಿ ದೇವಿಯನ್ನು ಸಿದ್ಧಪಡಿಸಿ ಆರ್ಟ್ ಆಫ್ ಲಿವಿಂಗ್ ಮೂಲಕ ಅರ್ಪಿಸಿದ್ದಾರೆ.