ಧಾರವಾಡ:ಬಾಲಕನ ಮೇಲೆ ನಾಯಿಗಳು ದಾಳಿ ಮಾಡಿದ್ದು, ಕಚ್ಚಿಸಿಕೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡದ ಹೊರವಲಯದ ನವಲೂರ ಗ್ರಾಮದ ರೈಲು ನಿಲ್ದಾಣದ ಬಳಿ ನಡೆದಿದೆ.
ಧಾರವಾಡದಲ್ಲಿ ನಾಯಿ ದಾಳಿಗೆ 6 ವರ್ಷದ ಬಾಲಕ ಬಲಿ: ಪೋಷಕರ ಆಕ್ರಂದನ - dogs killed six years old boy
ರಾಯಚೂರು ಮೂಲದ ಗೋಪಾಲ್ ಹಾಗು ಚನ್ನಮ್ಮ ದಂಪತಿಯ ಪುತ್ರ ಕಟ್ಟಡ ಕಾಮಗಾರಿಗಾಗಿ ಪೋಷಕರ ಜೊತೆ ಧಾರವಾಡಕ್ಕೆ ಬಂದಿದ್ದ. ಬಾಲಕನನ್ನು ಕೆಲಸದ ಜಾಗದಲ್ಲಿ ಬಿಟ್ಟು ಪೋಷಕರು ತಿಂಡಿ ತಿನ್ನಲು ಹೋಗಿದ್ದರು. ಈ ವೇಳೆ ನಾಯಿಗಳು ಬಾಲಕನ ಮೇಲೆರಗಿವೆ.
![ಧಾರವಾಡದಲ್ಲಿ ನಾಯಿ ದಾಳಿಗೆ 6 ವರ್ಷದ ಬಾಲಕ ಬಲಿ: ಪೋಷಕರ ಆಕ್ರಂದನ boy](https://etvbharatimages.akamaized.net/etvbharat/prod-images/768-512-12398386-thumbnail-3x2-new.jpg)
ಬಾಲಕನನ್ನು ಕೊಂದ ನಾಯಿಗಳು
ನಾಯಿಗಳ ದಾಳಿಗೆ 6 ವರ್ಷದ ಬಾಲಕ ಬಲಿ
ಬಾಬುಲ್ ರಾಠೋಡ (6) ಸಾವನ್ನಪ್ಪಿದ ಬಾಲಕ. ರಾಯಚೂರು ಜಿಲ್ಲೆಯ ಲಿಂಗಸೂರು ಮೂಲದ ಗೋಪಾಲ್ ಹಾಗು ಚನ್ನಮ್ಮ ದಂಪತಿಯ ಪುತ್ರ ಬಾಬುಲ್ ರಾಠೋಡ ಕಟ್ಟಡ ಕಾಮಗಾರಿಗಾಗಿ ಪೋಷಕರ ಜೊತೆ ಧಾರವಾಡಕ್ಕೆ ಬಂದಿದ್ದ.
ಬಾಲಕನನ್ನು ಕೆಲಸದ ಜಾಗದಲ್ಲಿ ಬಿಟ್ಟು ಪೋಷಕರು ತಿಂಡಿ ತಿನ್ನಲು ಹೋಗಿದ್ದರು. ಈ ವೇಳೆ ನಾಯಿಗಳು ಬಾಲಕನ ಮೇಲೆರಗಿವೆ. ನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Last Updated : Jul 8, 2021, 8:57 PM IST