ಹುಬ್ಬಳ್ಳಿ:ಜಿಲ್ಲೆಯಲ್ಲಿಕೊರೊನಾ ಅಟ್ಟಹಾಸ ನಿರಂತರವಾಗಿ ಮುಂದುವರೆದಿದ್ದು, ನಗರದ ಕಿಮ್ಸ್ ಆಸ್ಪತ್ರೆಯ ಮತ್ತಿಬ್ಬರು ವೈದ್ಯರಿಗೆ ಸೋಂಕು ದೃಢಪಟ್ಟಿದೆ.
ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ಮತ್ತು ಫಾರ್ಮಾಸಿಸ್ಟ್ ವೈದ್ಯರಿಗೆ ಸೋಂಕು ಇರುವುದು ಇದೀಗ ದೃಢವಾಗಿದೆ. ಅರವಳಿಕೆ ತಜ್ಞ ಕೋವಿಡ್ ವಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಫಾರ್ಮಾಸಿಸ್ಟ್ ವೈದ್ಯರಿಗೆ ಕೊರೊನಾ ಹೇಗೆ ಬಂದಿದೆ ಅನ್ನೋದು ಸದ್ಯಕ್ಕೆ ತಿಳಿದು ಬಂದಿಲ್ಲ.
ಹುಬ್ಬಳ್ಳಿಯಲ್ಲಿ ವೈದ್ಯರಿಗೂ ಕಂಟಕವಾದ ಮಹಾಮಾರಿ ಕೊರೊನಾ...! - ಕಿಮ್ಸ್ ಆಸ್ಪತ್ರೆಯ ವೈದ್ಯರಿಗೆ ಕೊರೊನಾ
ಹುಬ್ಬಳ್ಳಿಯಲ್ಲಿ ಕೊರೊನಾ ಸೋಂಕು ತನ್ನ ಕಬಂಧಬಾಹುವನ್ನು ಚಾಚುತ್ತಲೇ ಇದೆ. ಇದೀಗ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ಮತ್ತು ಫಾರ್ಮಾಸಿಸ್ಟ್ ವೈದ್ಯರಿಗೂ ತಗುಲಿದೆ.
ಹುಬ್ಬಳ್ಳಿ
ಈಗಾಗಲೇ ಕಿಮ್ಸ್ ನ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಹಿರಿಯ ವೈದ್ಯರಿಗೂ ಕೊರೊನಾ ದೃಢಪಟ್ಟಿರುವುದರಿಂದ ಆತಂಕ ಹೆಚ್ಚಾಗಿದೆ.