ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರ ಪಾತ್ರ ದೊಡ್ಡದಿದೆ. ಕೊರೊನಾ ನಿಯಂತ್ರಣಕ್ಕೆ ಜೀವ ಪಣಕ್ಕಿಟ್ಟು ಸೆಣಾಸಾಡುತ್ತಿದ್ದಾರೆ. ಅದರಲ್ಲೂ ನಗರದ ಹಳೇ ಕೋರ್ಟ್ ಹತ್ತಿರದ ಕುಂದಗೋಳ ಅಪಾರ್ಟ್ಮೆಂಟ್ನಲ್ಲಿರುವ ಡಾ. ಮಹಾಂತೇಶ ಹಳೇಮನಿ ಎಂಬ ವೈದ್ಯರು ಉಚಿತವಾಗಿ ಜನರಿಗೆ ಎಲುಬು ಚಿಕಿತ್ಸೆ ನೀಡುತಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಕೆಲವು ಖಾಸಗಿ ವೈದ್ಯರು ಚಿಕಿತ್ಸೆ ನೀಡಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಲಾಕ್ಡೌನ್ ಬಂಡವಾಳ ಮಾಡಿಕೊಂಡು ಎರಡು ಪಟ್ಟು ಬಿಲ್ ಮಾಡುತ್ತಿದ್ದಾರೆ. ಆದರೆ ಇವರು ಅದೆಲ್ಲದಕ್ಕೂ ಅಪವಾದ ಎಂಬಂತೆ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಈ ವೈದ್ಯ.