ಕರ್ನಾಟಕ

karnataka

ETV Bharat / state

ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೇಳಿಲ್ಲ: ಶಾಸಕ ವಿನಯ್​ ಕುಲಕರ್ಣಿ - ಲೋಕಸಭೆ ಚುನಾವಣೆ

ಸತೀಶ್ ಜಾರಕಿಹೊಳಿ ಕೆಲ ಶಾಸಕರ ಜೊತೆ ದುಬೈಗೆ ಹೊರಟಿರೋ ವಿಚಾರ ನನಗೆ ಗೊತ್ತಿಲ್ಲ- ಶಾಸಕ ವಿನಯ್​ ಕುಲಕರ್ಣಿ

MLA Vinaya Kulkarni spoke at the press conference.
ಶಾಸಕ ವಿನಯ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By ETV Bharat Karnataka Team

Published : Oct 28, 2023, 8:52 PM IST

ಶಾಸಕ ವಿನಯ್​ ಕುಲಕರ್ಣಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು..

ಧಾರವಾಡ: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಪಕ್ಷ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಿದೆ ಎಂಬ ವಿಚಾರಕ್ಕೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್​ ಕುಲಕರ್ಣಿ ಪ್ರತಿಕ್ರಿಯೆಸಿ, ನಾನು ಯಾವುದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೇಳಿಲ್ಲ. ಕೊಟ್ಟರೆ ನೋಡೋಣ ಏನಾಗುತ್ತದೆ ಎಂದು ಹೇಳಿದರು.

ಧಾರವಾಡ ಜಿಲ್ಲೆಯ ಹೊರವಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರು ಕೆಲ ಶಾಸಕರ ಜೊತೆ ದುಬೈಗೆ ಹೊರಟಿರುವ ವಿಚಾರ ನನಗೆ ಗೊತ್ತಿಲ್ಲ, ನನಗಂತೂ ದೇಶ ಬಿಟ್ಟು ಹೋಗಲು ಬರುವುದಿಲ್ಲ. ನನಗೆ ಹೊರದೇಶಕ್ಕೆ ಹೋಗಲು ಅವಕಾಶವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಆಪರೇಷನ್​ ಕಮಲ ನಡೆಯುತ್ತಿದೆ ಎಂಬ ಶಾಸಕ ರವಿ ಗಣಿಗ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಖರೀದಿ ಮಾಡುತ್ತಿರಬಹುದು? ಹಿಂದಿನಿಂದ ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಅದನ್ನೇ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದಲ್ಲಿ ಜನರಿಂದ ಗೆದ್ದು ಬಿಜೆಪಿಯವರು ರಾಜ್ಯದಲ್ಲಿ ಎಂದಿಗೂ ಆಡಳಿತಕ್ಕೆ ಬಂದಿಲ್ಲ. ಆದರೆ ಈ ಸಲ ನಮ್ಮ ರಾಜ್ಯದಲ್ಲಿ ಅದು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ತೆಲಂಗಾಣ, ಮಧ್ಯಪ್ರದೇಶ, ಛತ್ತಿಸಘಡ ವಿಧಾನಸಭೆ ಚುನಾವಣೆಯನ್ನು ಗೆಲ್ಲುತ್ತೇವೆ. ರಾಜ್ಯಸ್ಥಾನದಲ್ಲಿ ನೇರಾ ನೇರ ಸ್ಪರ್ಧೆ ಇದೆ ಅಲ್ಲಿಯೂ ಗೆಲ್ಲುವ ಪ್ರಯತ್ನ ನಡೆದಿದೆ. ಈ ಸಲ ಲೋಕಸಭೆ ಚುನಾವಣೆಯಲ್ಲಿ ಬದಲಾವಣೆ ಆಗಲಿದೆ. ಅದಕ್ಕೂ ಮೊದಲು ಜಿ.ಪಂ, ತಾ.ಪಂ ಚುನಾವಣೆ ನಡೆಯುತ್ತದೆ. ಡಿಸೆಂಬರ್‌ದೊಳಗೆ ಜಿಲ್ಲಾ ಪಂಚಾಯತ್​ ತಾಲೂಕು ಪಂಚಾಯತ್​ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.

ಸಿದ್ದರಾಮಯ್ಯರಿಂದ ಕೇಂದ್ರದ ವಿರುದ್ಧ ಅಭಿಯಾನ ಹಿನ್ನೆಲೆ ಕಳೆದ ಬಾರಿ ಕೇಂದ್ರದ ಬಳಿ ಸಾಕಷ್ಟು ಅಕ್ಕಿ ಇತ್ತು. ಆದರೂ ಕೊಡಲಿಲ್ಲ, ವಿದ್ಯುತ್ ಸಮಸ್ಯೆ ಆಗಿತ್ತು, ವಿದ್ಯುತ್ ಇದ್ದರೂ ನೆರೆ ರಾಜ್ಯದವರು ನಮಗೆ ಕೊಡಲಿಲ್ಲ. ರಾಜ್ಯಕ್ಕೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿದ್ದಾರೆ. ಇದೆಲ್ಲ‌ ಮೇಲ್ನೋಟಕ್ಕೆ ಕಾಣುತ್ತಿದೆ. ನಾವು ಹಣ ಕೊಡುವುದಕ್ಕೆ ತಯಾರ ಇದ್ದೇವಿ. ಆದರೂ ಏನೂ ಕೊಡುತ್ತಿಲ್ಲ ಎಂದು ಕೇಂದ್ರದ ವಿರುದ್ಧ ಶಾಸಕ ಕುಲಕರ್ಣಿ ಆರೋಪಿಸಿದರು.

ಹೀಗಾಗಿ ನಾವು ಸೋಲಾರ್ ಪ್ಲ್ಯಾಂಟ್ ಹಾಕಲು ಮುಂದಾಗಿದ್ದೇವೆ. ವಿದ್ಯುತ್ ಗ್ರಿಡ್‌ಗಳ ಪಕ್ಕದಲ್ಲೇ ಸೋಲಾರ ಘಟಕ ಮಾಡುತ್ತೇವೆ, ಅದು ಟೆಂಡರ್ ಹಂತದಲ್ಲಿದೆ. ಇಂಧನ ಸಚಿವ ಜಾರ್ಜ್ ಅವರು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಲಾರ್ ಗ್ರಿಡ್ ಮಾಡಿ ವಿದ್ಯುತ್ ಕೊಡುತ್ತೇವೆ ಎಂದು ತಿಳಿಸಿದರು.

ಇದನ್ನೂಓದಿ:ಬಿಜೆಪಿಯವರು 2500 ಎಂಎಲ್​​​ಎಗಳನ್ನು ಖರೀದಿ ಮಾಡಿದ್ದಾರೆ : ಸಚಿವ ಸಂತೋಷ್​ ಲಾಡ್

ABOUT THE AUTHOR

...view details