ಕರ್ನಾಟಕ

karnataka

ETV Bharat / state

ಕಳೆದ ನೆರೆ ಪರಿಹಾರವೇ ಕೊಟ್ಟಿಲ್ಲ.. ಅವ್ರೆಲ್ಲಾ ಪ್ರವಾಸ ಮಾಡಿ ರೆಸ್ಟ್ ಮಾಡಲಿ : ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಕಿಡಿ - ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೇಂದ್ರ ಮತ್ತು ರಾಜ್ಯ ಸರ್ಕಾರವೂ ನೆರೆ ಪರಿಹಾರ ನೀಡಿಲ್ಲ. ನಾನಿದನ್ನ ಸದನದಲ್ಲೂ ಹೇಳಿದ್ದೇನೆ. ಅವರಿಗೆ ಅಧಿಕಾರ ಮುಖ್ಯ, ಜನರ ಹಿತವಲ್ಲ..

DK Shivakumar
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

By

Published : Jul 30, 2021, 5:11 PM IST

ಹುಬ್ಬಳ್ಳಿ :ಕಳೆದ ಬಾರಿಯನೆರೆ ಪರಿಹಾರವೇ ಇನ್ನೂ ಸಿಕ್ಕಿಲ್ಲ. ಮನೆ ಬಿದ್ದಿರೋದಕ್ಕೆ ₹5 ಲಕ್ಷ ಕೊಡ್ತೀನಿ ಅಂದಿದ್ರೂ ಏನೂ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಕೊಡಲಿಲ್ಲ, ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಕಳೆದ ನೆರೆ ಪರಿಹಾರವೇ ಕೊಟ್ಟಿಲ್ಲ..

ಹುಬ್ಬಳ್ಳಿಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ನೆರೆಪರಿಹಾರ ಇನ್ನೂ ಬಿಡುಗಡೆಯಾಗಿಲ್ಲ. ಅವರೆಲ್ಲಾ ಪ್ರವಾಸ ಮಾಡಿ ರೆಸ್ಟ್ ಮಾಡಲಿ, ಜನ ಸಾಯ್ತಿದ್ದಾರೆ. ಮತದಾರರು ಮುಂದೆ ವೋಟ್ ಮಾಡುವಾಗ ಏನೆಂದು ತೋರಿಸುತ್ತಾರೆ. ಬಿಜೆಪಿಯಲ್ಲಿ ಸಚಿರಾಗಲು ಅವರು ಬಹಳ ಅರ್ಜೆಂಟ್​​​ನಲ್ಲಿದ್ದಾರೆ. ಅವರಿಗೆ ರಾಜ್ಯದ ಜನರ ಹಿತ ಮುಖ್ಯವಲ್ಲ, ಅವರಿಗೆ ಪವರ್ ಬೇಕಾಗಿದೆ ಎಂದು ಕಿಡಿಕಾರಿದರು.

ಓದಿ:ಕಾಂಗ್ರೆಸ್ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಡಿ.ಕೆ ಶಿವಕುಮಾರ್

ABOUT THE AUTHOR

...view details