ಕರ್ನಾಟಕ

karnataka

ETV Bharat / state

ಸ್ವಂತ ಬಲದಿಂದ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಡಿ.ಕೆ ಶಿವಕುಮಾರ್ ವಿಶ್ವಾಸ - ಮಹಾನಗರ ಪಾಲಿಕೆ ಚುನಾವಣೆ ದಿನಾಂಕ

ಎಲ್ಲ ಪಾಲಿಕೆಗಳಲ್ಲೂ ಕಾಂಗ್ರೆಸ್​ ಅಧಿಕಾರಕ್ಕೆ ಬರಲಿದೆ ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಹುಬ್ಬಳ್ಳಿ-ಧಾರವಾಡದಲ್ಲೂ ನಾವೇ ಅಧಿಕಾರಕ್ಕೆ ಬರಲಿದ್ದೇವೆ ಎಂದರು.

DK Shivakumar
ಡಿ.ಕೆ ಶಿವಕುಮಾರ್

By

Published : Aug 28, 2021, 7:46 PM IST

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಈಗಾಗಲೇ ನಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರುತ್ತೇವೆ‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ವಂತ ಬಲದಿಂದ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಡಿ.ಕೆ ಶಿವಕುಮಾರ್ ವಿಶ್ವಾಸ

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಹುಬ್ಬಳ್ಳಿಗೆ ಬಂದಾಗ ಯಾವ ರೀತಿ ಸ್ವಾಗತ ಸಿಕ್ಕಿದೆ..? ಅದು ಪಾಲಿಕೆ ಚುನಾವಣೆಯಲ್ಲಿ ಗೊತ್ತಾಗುತ್ತೆ. ಬಿಜೆಪಿ ಮೀಷನ್ 60 ಆದ್ರೂ ಅನ್ನಲಿ, ಅಲ್ಲಿ ಬೆಂಗಳೂರಿನಲ್ಲಿ ಮೀಷನ್ 150 ಆದ್ರೂ ಅನ್ನಲಿ. ನಾವೇ ಆಡಳಿತ ನಡೆಸೋದು. ಸ್ವಂತ ಬಲದ ಮೇಲೆ ಮೂರು ಪಾಲಿಕೆಯಲ್ಲಿ ಅಧಿಕಾರಕ್ಕೆರುತ್ತೇವೆ ಎಂದರು.

ಮೈಸೂರು ಘಟನೆ ಸಂಬಂಧ ಪ್ರತಿಕ್ರಿಯಿಸಿದ ಅವರು, ವಿವಿಯ ಉಪಕುಲಪತಿಯನ್ನ ತೆಗೆದುಹಾಕಬೇಕು. ಯಾವ ದೇಶ ನಮ್ಮದು..? ರಾತ್ರಿ ಹೊತ್ತು ಹುಡುಗಿಯರು ಓಡಾಡಬಾರದು ಎಂದರೆ ಹೇಗೆ..? ಯೂನಿವರ್ಸಿಟಿ ಅಲ್ಲೇ ಈ ಸ್ಥಿತಿ ಆದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಓದಿ:ಮಂಟಪದಲ್ಲೂ ಗುಟ್ಕಾ ಅಗಿಯುತ್ತಿದ್ದ ವರ... ವಧುವಿನಿಂದ ಕಪಾಳಮೋಕ್ಷ

ABOUT THE AUTHOR

...view details