ಧಾರವಾಡ:ಬೆಳಗಾವಿಯ ಜಾರಕಿಹೊಳಿ ಕುಟುಂಬವೇ ನನಗೆ ಪರಮಾತ್ಮ. ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋಗಬಾರದಿತ್ತು ಎಂದು ಕಾಂಗ್ರೆಸ್ ಮುಖಂಡ ಹಾಗೂ ಎಐಸಿಸಿ ದಿಯು-ದಮನ್ ಚುನಾವಣಾ ಉಸ್ತುವಾರಿ ದೀಪಕ್ ಚಿಂಚೊರೆ ಹೇಳಿದರು.
ಜಾರಕಿಹೊಳಿ ಕುಟುಂಬವೇ ನನಗೆ ಪರಮಾತ್ಮ:ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೂರೆ - ಧಾರವಾಡ
ಜಾರಕಿಹೊಳಿ ಕುಟುಂಬ ಕಾಂಗ್ರೆಸ್ ಕುಟುಂಬ. ಅವರೆಲ್ಲರೂ ನನಗೆ ಆತ್ಮೀಯರು. ನನಗೆ ಅವರ ಕುಟುಂಬವೇ ಪರಮಾತ್ಮ ಎಂದು ಕಾಂಗ್ರೆಸ್ ಮುಖಂಡ ಹಾಗೂ ಎಐಸಿಸಿ ದಿಯು - ದಮನ್ ಚುನಾವಣಾ ಉಸ್ತುವಾರಿ ದೀಪಕ್ ಚಿಂಚೊರೆ ಹೇಳಿದರು.

ಎಐಸಿಸಿ ದಿಯು-ದಮನ್ ಚುನಾವಣಾ ಉಸ್ತುವಾರಿ ದೀಪಕ್ ಚಿಂಚೊರೆ
ಧಾರವಾಡದಲ್ಲಿ ಈ ಕುರಿತು ಮಾತನಾಡಿರುವ ಅವರು, ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋಗಬಾರದಿತ್ತು. ಹೋಗಬೇಡ ಎಂದು ಬಹಳ ಸಲ ಹೇಳಿದ್ದೆ ಎಂದು ಹೇಳಿದರು. ಜಾರಕಿಹೊಳಿ ಕುಟುಂಬ ಕಾಂಗ್ರೆಸ್ ಕುಟುಂಬ. ಅವರೆಲ್ಲರೂ ನನಗೆ ಆತ್ಮೀಯರು. ಮೊದಲು ಕಾಂಗ್ರೆಸ್‌ನಲ್ಲಿ ಖಾಯಂ ಇದ್ದವರು ರಮೇಶ್ ಜಾರಕಿಹೊಳಿ.
ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೂರೆ
ನನಗೆ ಜಾರಕಿಹೊಳಿ ಕುಟುಂಬವೇ ಪರಮಾತ್ಮ. ನಾನು ಕಿಟ್ ಹಂಚುವಾಗ ಬಾಲಚಂದ್ರ ಜಾರಕಿಹೊಳಿ ಮಾದರಿ ಎಂದು ಹೇಳಿದ್ದೆ. ಅವರು ಬಿಜೆಪಿಯಲ್ಲಿದ್ದರೂ ಅದೇ ಮಾತನ್ನು ಹೇಳಿದ್ದೇನೆ. ಅವರ ಜನ ಸಂಪರ್ಕ ನೋಡಿ ನಾನು ಕೆಲಸ ಮಾಡಿದ್ದೇನೆ ಎಂದರು.
Last Updated : Jul 19, 2021, 2:27 PM IST