ಧಾರವಾಡ:ಲಾಕ್ಡೌನ್ ಹಿನ್ನೆಲೆ ಅರ್ಚಕ ಹಾಗೂ ಪುರೋಹಿತರಿಗೆ ಸಹಾಯಧನ ನೀಡುವಂತೆ ಆಗ್ರಹಿಸಿ ಜಿಲ್ಲಾ ಅರ್ಚಕ ಪುರೋಹಿತ ಜಂಗಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಮಗೂ ಸಹಾಯಧನ ನೀಡಿ: ಜಿಲ್ಲಾ ಅರ್ಚಕ ಪುರೋಹಿತ ಜಂಗಮಾಭಿವೃದ್ಧಿ ಸಂಘದಿಂದ ಮನವಿ - ಡಿಸಿಗೆ ಮನವಿ ಸಲ್ಲಿಸಿದ ಜಿಲ್ಲಾ ಅರ್ಚಕ ಪುರೋಹಿತ ಜಂಗಮಾಭಿವೃದ್ದಿ ಸಂಘ...
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಂಘದ ಸದಸ್ಯರು ಲಾಕ್ಡೌನ್ ಹಿನ್ನೆಲೆ ಜೀವನ ನಡೆಸುವುದು ದುಸ್ತರವಾಗಿದೆ. ಈ ಕಾರಣ ಸರ್ಕಾರ ನಮಗೂ ಸಹಾಯಧನ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಡಿಸಿಗೆ ಮನವಿ ಸಲ್ಲಿಸಿದ ಜಿಲ್ಲಾ ಅರ್ಚಕ ಪುರೋಹಿತ ಜಂಗಮಾಭಿವೃದ್ದಿ ಸಂಘ....
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಂಘದ ಸದಸ್ಯರು, ಲಾಕ್ಡೌನ್ ಹಿನ್ನೆಲೆ ಜೀವನ ನಡೆಸುವುದು ದುಸ್ತರವಾಗಿದೆ. ಈ ಕಾರಣ ಸರ್ಕಾರ ನಮಗೂ ಸಹಾಯಧನ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಜಿಲ್ಲೆಯ ಅರ್ಚಕರು, ಪುರೋಹಿತರು ಸಮಾಜದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಲಾಕ್ಡೌನ್ ಹಿನ್ನೆಲೆ ಮಠ, ಮಂದಿರ, ಧಾರ್ಮಿಕ ಕೇಂದ್ರಗಳು, ಪೂಜಾ ಕಾರ್ಯಕ್ರಮಗಳು ಸಂಪೂರ್ಣ ಬಂದ್ ಆಗಿರುವ ಕಾರಣ ಜೀವನ ನಡೆಸಲು ತೊಂದರೆಯಾಗುತ್ತಿದೆ. ಸರ್ಕಾರ ಸಹಾಯಧನ ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.