ಧಾರವಾಡ: ಎಲ್ಐಸಿ ಪಾಲಿಸಿ ಹೊಂದಿದ್ದರೂ, ಗ್ರಾಹಕರಿಗೆ ವೈದ್ಯಕೀಯ ಕ್ಲೇಮ್ ತಿರಸ್ಕರಿಸಿ, ಸರಿಯಾಗಿ ಸ್ಪಂದಿಸದೇ ಸೇವಾ ನ್ಯೂನ್ಯತೆ ಎಸಗಿದೆ ಎಂದು ಎಲ್ಐಸಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ.
ಸ್ಥಳೀಯ ಎಂ.ಬಿ.ನಗರದ ನಿವಾಸಿ ಪ್ರಮಥನಾಥ ಮತ್ತು ಶ್ರೀದೇವಿ ಪಾವಟೆ ಎಂಬ ದಂಪತಿಗಳು ತಾವು ಈ ಹಿಂದೆ ಅಕ್ಟೋಬರ್ 30, 2008 ರಂದು 10 ವರ್ಷದ ಅವಧಿಯ ಎಲ್ಐಸಿ ಹೆಲ್ತ್ ಪ್ಲಸ್ ಪಾಲಿಸಿ (ವೈದ್ಯಕೀಯ ವಿಮೆ) ಖರೀದಿಸಿದ್ದರು. ಶ್ರೀದೇವಿ ಅವರು ಅಕ್ಟೋಬರ್ 30, 2008 ರಂದು ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ದಾಖಲಾಗಿ ಕಿಬ್ಬೊಟ್ಟೆಯ ಸಮಸ್ಯೆಗಾಗಿ ರೂ.79,216 ಭರಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಆ ವೈದ್ಯಕೀಯ ವೆಚ್ಚವನ್ನು ತನಗೆ ಪಾವತಿಸುವಂತೆ ಎಲ್ಐಸಿ ಆಫ್ ಇಂಡಿಯಾಗೆ ತಮ್ಮ ಪಾಲಿಸಿ ಆಧಾರದಲ್ಲಿ ಕ್ಲೇಮ್ ಅರ್ಜಿ ಸಲ್ಲಿಸಿದ್ದರು.
ಆದರೆ, ಎಲ್ಐಸಿಯು ತಮ್ಮ ಕ್ಲೇಮ್ ಅನ್ನು ಸೂಕ್ತ ಕಾರಣವಿಲ್ಲದೇ ತಿರಸ್ಕರಿಸಿ, ಸೇವಾ ನ್ಯೂನ್ಯತೆ ಎಸಗಿದೆ ಎಂದು ಅವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ.ಕ.ಭೂತೆ ಹಾಗೂ ಸದಸ್ಯರಾದ ವಿ.ಎ.ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು, ಎಲ್ಐಸಿಯ ಫಿರ್ಯಾದಿದಾರರು ಪಾಲಿಸಿ ಹೊಂದಿದ್ದರು.