ಕೊರೊನಾ ಭೀತಿಯ ನಡುವೆಯೂ ಬಯೋಮೆಟ್ರಿಕ್ ಮೂಲಕ ಪಡಿತರ ವಿತರಣೆ - ತೊರವಿಹಕ್ಕಲ ನ್ಯಾಯಬೆಲೆ ಅಂಗಡಿ
ಹುಬ್ಬಳ್ಳಿ ನಗರದ ತೊರವಿಹಕ್ಕಲ ನ್ಯಾಯಬೆಲೆ ಅಂಗಡಿಯವರು ಪಡಿತರ ಚೀಟಿ ಹೊಂದಿದವರ ಹತ್ತಿರ ಬಯೋಮೆಟ್ರಿಕ್ ಹಾಕಿಸುವುದರ ಮೂಲಕ ಪಡಿತರ ವಿತರಿಸುತ್ತಿದ್ದಾರೆ.
ಬಯೋಮೆಟ್ರಿಕ್
ಹುಬ್ಬಳ್ಳಿ:ಕೋವಿಡ್-19 ವೈರಸ್ ಹರಡುವ ಭೀತಿಯಲ್ಲಿ ಅಕ್ಕಿ ವಿತರಣೆಯನ್ನು ಬಯೋಮೆಟ್ರಿಕ್ ನೀಡದೆ ಕೇವಲ ಓಟಿಪಿ ಮೂಲಕ ಪಡೆಯುವ ನಿಯಮ ಜಾರಿಯಲ್ಲಿದೆ. ಆದರೆ, ಜಿಲ್ಲೆಯ ಇಲ್ಲೊಂದು ನ್ಯಾಯ ಬೆಲೆ ಅಂಗಡಿ ಮಾತ್ರ ಬಯೋಮೆಟ್ರಿಕ್ ಮೂಲಕವೇ ಅಕ್ಕಿ ನೀಡುತ್ತಿದೆ.
ಆದ್ರೆ, ನಗರದಲ್ಲಿ ಮಾತ್ರ ಇನ್ನೂ ಹೆಬ್ಬೆಟ್ಟಿನ ಗುರುತಿನ ಮೂಲಕ ಅಕ್ಕಿ ವಿತರಣೆ ಮಾಡುತ್ತಿದ್ದು ಸೋಂಕು ಹರಡುವಿಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಜನರು ದೂರಿದ್ದಾರೆ.