ಹುಬ್ಬಳ್ಳಿ: ಇಲ್ಲಿನ ರಾಮನಗರದಲ್ಲಿ ವಾಸವಾಗಿರುವ ಜನರಿಗೆ ಸರ್ಕಾರದಿಂದ ಉಚಿತ ಹಾಲು ವಿತರಣೆ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹಾಲು ವಿತರಣೆಗೆ ಚಾಲನೆ ನೀಡಿದರು.
ಪಾಲಿಕೆ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ಸವಕಾರ, ಮಹೇಂದ್ರ ಕೌತಾಳ್, ಕೆಎಂಎಫ್ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.
ಉಚಿತ ಆಹಾರ ಧಾನ್ಯ ಹಾಗೂ ದಿನಸಿ ವಿತರಣೆ:
ಉಚಿತ ಆಹಾರ ಧಾನ್ಯ ಹಾಗೂ ದಿನಸಿ ವಿತರಣೆ ಎಸ್.ಎಸ್.ಶೆಟ್ಟರ್ ಫೌಂಡೇಶನ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹುಬ್ಬಳ್ಳಿಯ ಬಡ ಜನರಿಗೆ ಉಚಿತ ಆಹಾರ ಧಾನ್ಯ ಹಾಗೂ ದಿನಸಿಗಳನ್ನು ವಿತರಿಸಿದರು. ನಾಗಶೆಟ್ಟಿ ಕೊಪ್ಪಾ, ಉದಯನಗರ, ರಾಮನಗರ ಸೇರಿದಂತೆ ಹಲವು ಪ್ರದೇಶಗಳ ಒಟ್ಟು 250 ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಿದರು.