ಕರ್ನಾಟಕ

karnataka

ETV Bharat / state

'ನಾಟಕದ ಡೈಲಾಗ್ ಹೇಳಾಕ್​ ಬರೊಲ್ಲಾ ರೀ ಅಂಥವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಾರ': ಹಿರಿಯ ಕಲಾವಿದ ಆರೋಪ - ಶ್ರೀಶೈಲ್ ಹುದ್ದಾರ

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಹಿರಿಯ ಕಲಾವಿದ ಸದಾಶಿವನಗೌಡ ಅರ್ಜಿ ಹಾಕಿದ್ದರು. ಆದ್ರೆ ಸಿಎಂ ತವರು ಜಿಲ್ಲೆಯವರು ಎನ್ನುವ ಕಾರಣಕ್ಕೆ ಬೇರೊಬ್ಬ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸದಾಶಿವನಗೌಡ ಆರೋಪಿಸಿದ್ದಾರೆ.

Senior theater artist Sadashivan Gowda Jana Gowdara
ಹಿರಿಯ ನಾಟಕ ಕಲಾವಿದ ಸದಾಶಿವನಗೌಡ ಜನಗೌಡರ

By

Published : Oct 31, 2022, 12:34 PM IST

Updated : Oct 31, 2022, 1:28 PM IST

ಧಾರವಾಡ:ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಹಿನ್ನೆಲೆ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ತಮ್ಮನ್ನು ಪರಿಗಣಿಸದಿರುವುದಕ್ಕೆ ಕೆಲವರಿಗೆ ಅಸಮಾಧಾನ ಉಂಟಾಗಿದೆ. ಹಿರಿಯ ನಾಟಕ ಕಲಾವಿದ ಸದಾಶಿವನಗೌಡ ಜನಗೌಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಿರಿಯ ಕಲಾವಿದ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ.

'ನನಗೆ ಅನ್ಯಾಯ ಆಗಿದೆ. ಅರ್ಹತೆ ಇಲ್ಲದಿದ್ದರೂ ಸಿಎಂ ಬೊಮ್ಮಾಯಿ ಅವರ ಕ್ಷೇತ್ರದ ಕಲಾವಿದ ಎಂಬ ಕಾರಣಕ್ಕೆ ಬೇರೊಬ್ಬ ಕಲಾವಿದನನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಂಗಭೂಮಿಗೆ ನೀಡುವ ಪ್ರಶಸ್ತಿಯಲ್ಲಿ ಅನ್ಯಾಯ ಆಗಿದೆ' ಎಂದು ಆರೋಪಿಸಿದ್ದಾರೆ.

ಅರ್ಹರಿಗೆ ಪ್ರಶಸ್ತಿ ನೀಡದೆ ತಾರತಮ್ಯ ಮಾಡಲಾಗಿದೆ. ನಾಟಕದ ಅರಿವೇ ಇಲ್ಲದವರಿಗೆ ನೀಡಿ ನನಗೆ ಮೋಸ ಮಾಡಲಾಗಿದೆ ಎಂದು ಸದಾಶಿವನಗೌಡ ಅಳಲು ತೋಡಿಕೊಂಡಿದ್ದಾರೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಹಿರಿಯ ಕಲಾವಿದ ಸದಾಶಿವನಗೌಡ ಅರ್ಜಿ ಹಾಕಿದ್ದರು. ಆದ್ರೆ ತಮ್ಮನ್ನು ಕಡೆಗಣಿಸಿ ಸಿಎಂ ತವರು ಜಿಲ್ಲೆಯವರು ಎನ್ನುವ ಕಾರಣಕ್ಕೆ ಮತ್ತೊಬ್ಬ ಕಲಾವಿದನನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹಿರಿಯ ಕಲಾವಿದ.

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ.. ಹಿರಿಯ ಕಲಾವಿದರ ಆಕ್ಷೇಪ

ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡುತ್ತೇವೆ ಎಂದು ಸರ್ಕಾರದವರು ಹೇಳುತ್ತಾರೆ. ಆದ್ರೆ ಆಯ್ಕೆ ಆದವರಿಗೆ ಒಂದೇ ಒಂದು ನಾಟಕದ ಡೈಲಾಗ್ ಹೇಳಾಕ್​ ಬರುವುದಿಲ್ಲಾ ಎಂದು ಹಿರಿಯ ಕಲಾವಿದ ಸದಾಶಿವನಗೌಡ ಆರೋಪಿಸಿದ್ದಾರೆ. ಈ ಬಾರಿ ಜಿಲ್ಲೆಗೆ ನಾಲ್ಕು ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ. ಒಂದು ಸಂಗೀತ, ಒಂದು ಜಾನಪದ ಕ್ಷೇತ್ರಕ್ಕೆ, ಒಂದು ಬಯಲಾಟ ಇನ್ನೊಂದು ಕ್ರೀಡಾ ಕ್ಷೇತ್ರಕ್ಕೆ ನೀಡಲಾಗಿದೆ.

ಇದನ್ನೂ ಓದಿ:ಇಸ್ರೋ ಮಾಜಿ ಅಧ್ಯಕ್ಷ ಕೆ ಸಿವನ್, ನಟ ದತ್ತಣ್ಣ‌, ಸಾಹಿತಿ ಕೃಷ್ಣೇಗೌಡ ಸೇರಿ 67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

Last Updated : Oct 31, 2022, 1:28 PM IST

ABOUT THE AUTHOR

...view details