ಧಾರವಾಡ: ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಪ್ರಸ್ತುತ ನಟರ ನಡವಳಿಕೆ ಕುರಿತಂತೆ ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ನಟರ ನಡವಳಿಕೆ ಬಗ್ಗೆ ನಿರ್ದೇಶಕ ಟಿಎಸ್ ನಾಗಾಭರಣ ಬೇಸರ ನಗರದಲ್ಲಿ ನಡೆದ ಕನ್ನಡ ನಾಡು-ನುಡಿ ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ಅವರು, ಟಿವಿ ಸಂದರ್ಶನಗಳಲ್ಲಿ ನಟರು ಕುಳಿತುಕೊಳ್ಳುವ ಭಂಗಿ ನೋಡಬೇಕು. ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಹಿಂದಿನ ಯಾವ ನಟರೂ ಆ ರೀತಿ ಕುಳಿತುಕೊಳ್ಳಿತ್ತಿರಲಿಲ್ಲ. ಹಾಗೆಯೇ ಸಿನಿಮಾದ ಪಾತ್ರದ ಬಗ್ಗೆ ಕೇಳಿದ್ರೆ ಡಿಫರೆಂಟ್ ಇದೆ ಅಂತಾರೆ. ಏನು ಡಿಫರೆಂಟ್ ಅಂತ ಕೇಳಿದರೆ ಬಹಳ ಡಿಫರೆಂಟ್ ಆಗಿದೆ ಅಂತಾರೆ. ಅದು ಏನು ಅನ್ನೋದು ಮಾತ್ರ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಕರ್ನಾಟಕಕ್ಕೆ ಮಹಿಳಾ ಸಿಎಂ ಯಾವಾಗ:
ಇದುವರೆಗೂ ನಮ್ಮ ರಾಜ್ಯದಲ್ಲಿ ಒಬ್ಬರಾದರೂ ಮಹಿಳೆಯರು ಮುಖ್ಯಮಂತ್ರಿಯಾಗಿದ್ದಾರಾ. ಬೇರೆ ಕಡೆ ಆಗಿದ್ದಾರೆ. ಮಹಿಳಾ ಪ್ರಾತಿನಿಧ್ಯ ರಾಜಕೀಯದಲ್ಲಿ ಎಷ್ಟಾಗಿದೆ. ಸಾಹಿತ್ಯ, ಸಾಂಸ್ಕೃತಿಕ, ಆಡಳಿತದಲ್ಲಿ ಮಹಿಳೆಯ ಬಗ್ಗೆ ಯೋಚನೆ ಮಾಡುತ್ತೇವೆ. ಆದರೆ, ರಾಜಕಾರಣದಲ್ಲಿ ಬೆಳೆದಾಗ ಮಾತ್ರ ಶಕ್ತಿ ಆಗಲು ಸಾಧ್ಯ. ಪ್ರಜಾಪ್ರಭುತ್ವದ ಪರಿದಿಯಲ್ಲಿ ಮಹಿಳಾ ಶಕ್ತಿ ಹುಟ್ಟು ಹಾಕಬೇಕಿದೆ. ಅದ್ಭುತ ಮಹಿಳಾ ಆಡಳಿತಗಾರರು ಆಗಿದ್ದಾರೆ. ಇಂದಿರಾಗಾಂಧಿ, ಮಮತಾ ಬ್ಯಾನರ್ಜಿಯಂತವರು ಕರ್ನಾಟಕದಲ್ಲಿಯೂ ಆಗಬೇಕು ಎಂದರು.
ಇದನ್ನೂ ಓದಿ: ರಾಜ್ಯಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಲ್ಲಿ ಹೆಚ್ಚಿದ ಕೋವಿಡ್.. ಇಂದು 238 ಹೊಸ ಕೇಸ್ ಪತ್ತೆ