ಹುಬ್ಬಳ್ಳಿ: ಮೂರುಸಾವಿರ ಮಠ ಮರಳಿ ಪಡೆಯಲು ನಮ್ಮ ಹೋರಾಟ ನಿರಂತರವಾಗಿರಲಿದೆ. ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ರಾಜ್ಯದ ಮಠಗಳ ಆಸ್ತಿ ಉಳಿಸುವ ಉದ್ದೇಶದಿಂದ ಅಖಿಲ ಭಾರತ ವೀರೇಶೈವ ಮಹಾಸಭಾ ಶಂಕರ್ ಬಿದರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ಈ ಸಮಿತಿ ಮೂರುಸಾವಿರ ಮಠದ ಆಸ್ತಿ ಮರಳಿ ಕೊಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಕೆಎಲ್ಇ ಸಂಸ್ಥೆ ಹಠಮಾರಿ ಧೋರಣೆ ತೋರುತ್ತಿರುವುದು ವಿಷದಾದನೀಯವಾಗಿದೆ. ಕೋರ್ಟ್ ತೀರ್ಪು ಕೊಡುವ ಪೂರ್ವದಲ್ಲಿ ಮಠದ ಆಸ್ತಿ ಮಠಕ್ಕೆ ಬಿಡಬೇಕು. ಹಾವೇರಿ ಗದಗ, ಹುಬ್ಬಳ್ಳಿಯಲ್ಲಿ ಮಠದ ಅಭಿಮಾನಿಗಳು ಹಾಗೂ ಭಕ್ತರ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಶಂಕರಣ್ಣ ಮುನವಳ್ಳಿಯವರು ಹಿರಿಯರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಹೀಗಾಗಿ ಕೆಲ ದಿನಗಳ ಕಾಲ ಹೋರಾಟ ಸ್ಥಗಿತಗೊಳಿಸಿದ್ದೆವು. ಆದ್ರೆ ಈಗ ನಮ್ಮ ಹೋರಾಟ ಮತ್ತೊಂದು ದಿಕ್ಕಿನಲ್ಲಿ ತಿರುಗುವ ಸೂಚನೆ ಕಾಣುತ್ತಿದೆ. ಹೀಗಾಗಿ ಮತ್ತೊಮ್ಮೆ ಹೋರಾಟ ನಡೆಸಲು ಸಿದ್ಧತೆ ಮಾಡುತ್ತಿದ್ದೇವೆ ಎಂದರು.