ಧಾರವಾಡ: ಜಗದ್ಗುರುಗಳು ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಲವು ಜನರು ನನ್ನ ಮತ್ತು ಗುರುಗಳ ಸಂಬಂಧವನ್ನು ಕೆಡಿಸುವ ಹುನ್ನಾರ ನಡೆಸಿದ್ದಾರೆ. ನಾವು ಗುರು-ಶಿಷ್ಯರು, ತಂದೆ ಮಕ್ಕಳಂತೆ ಇದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಧಾರವಾಡದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಧಾರವಾಡದ ಲಿಂಗಾಯತ ಭವನದಲ್ಲಿ ಭಕ್ತರು ಹಾಗೂ ಮುಖಂಡರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಹಿಂದೆ ರಾಜಕೀಯ ಆಟ ನಡೆಯುತ್ತಿದೆ. ನಾನು ಮಠದಲ್ಲಿ ರಾಜಕೀಯ ಬರುವಂತೆ ಮಾಡಿದವನಲ್ಲ. ನನ್ನ ವಿರೋಧ ಮಾಡುವುದಕ್ಕಾಗಿಯೇ ಇದೆಲ್ಲಾ ನಡೆದಿದೆ. ಅಲ್ಲದೇ 23ನೇ ತಾರೀಖಿನಂದು ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದರು.