ಕರ್ನಾಟಕ

karnataka

ETV Bharat / state

ಮೂರು ಸಾವಿರ ಮಠದ ವಿವಾದ: ಕುತೂಹಲ ಮೂಡಿಸಿದ ರಾಜಯೋಗೀಂದ್ರ - ದಿಂಗಾಲೇಶ್ವರ ಶ್ರೀ ಭೇಟಿ - muru savir math hubli

ಹುಬ್ಬಳ್ಳಿಯ ಮೂರು ಸಾವಿರ ಮಠದ ಪೀಠಾಧಿಪತಿ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳನ್ನ ದಿಂಗಾಲೇಶ್ವರ ಸ್ವಾಮೀಜಿ ಭೇಟಿ ಮಾಡಿದ್ದಾರೆ. ಈ ಭೇಟಿ ಭಕ್ತ ವಲಯದಲ್ಲಿ ತೀವ್ರ ಕುತೂಹಲ‌ ಮೂಡಿಸಿದೆ‌.

ಮೂರು ಸಾವಿರ ಮಠ
ಮೂರು ಸಾವಿರ ಮಠ

By

Published : Sep 30, 2021, 11:18 AM IST

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಷ್ಠಿತ ಮೂರು ಸಾವಿರ ಮಠದ ವಿವಾದ ಸದ್ಯಕ್ಕೆ ಶಾಂತವಾಗಿದೆ. ಈ ಮಧ್ಯೆಯೇ ಮೂರು ಸಾವಿರ ಮಠದ ಪೀಠಾಧಿಪತಿ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳನ್ನ ದಿಂಗಾಲೇಶ್ವರ ಸ್ವಾಮೀಜಿ ಭೇಟಿ ಮಾಡಿದ್ದು, ತೀವ್ರ ಕುತೂಹಲ‌ ಮೂಡಿಸಿದೆ‌.

ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀ ಮೂರುಸಾವಿರ ಮಠದ ಉತ್ತರಾಧಿಕಾರಿಯಾಗಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೆ ತೀವ್ರ ವಿರೋಧ ಸಹ ವ್ಯಕ್ತವಾಗಿತ್ತು. ಇದಕ್ಕೆ ಮಠದ ಉನ್ನತ ಮಟ್ಟದ ಸಮಿತಿ ಸೇರಿದಂತೆ ಮೂಜಗು ಶ್ರೀಗಳು ಒಪ್ಪಿಗೆ ಸೂಚಿಸಿರಲಿಲ್ಲ. ಆದರೆ ಈಗ ಉಭಯ ಶ್ರೀಗಳ ಭೇಟಿ ಬಹಳಷ್ಟು ಕುತೂಹಲ ಕೆರಳಿಸಿದೆ.

ಮೂರು ಸಾವಿರ ಮಠ

ಮಠದ ಉತ್ತರಾಧಿಕಾರಿ ಜಗಳದಿಂದಾಗಿ ಇಬ್ಬರು ಸ್ವಾಮೀಜಿಗಳು ಕಳೆದ 2 ವರ್ಷದಿಂದ ಮುಖಾಮುಖಿಯಾಗುತ್ತಿರಲಿಲ್ಲ. ಇದೀಗ ಇಬ್ಬರೂ ಭೇಟಿಯಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರಿಂದ ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಮತ್ತೆ ಮುನ್ನೆಲೆಗೆ ಬರುತ್ತಾ? ಎಂಬ ಕುತೂಹಲ ಮೂಡಿಸಿದೆ‌‌.

ABOUT THE AUTHOR

...view details