ಹುಬ್ಬಳ್ಳಿ :ಫೆಬ್ರವರಿ ತಿಂಗಳು ಆರಂಭವಾಯ್ತು ಅಂದರೆ ಸಾಕು ಪ್ರೇಮಿಗಳ ಮನಸ್ಸಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ವ್ಯಾಲೆಂಟೆನ್ಸ್ ಡೇ, ರೋಸ್ ಡೇ ಹೀಗೆ ಹಲವಾರು ದಿನಗಳ ಆಚರಣೆಯನ್ನು ಆಚರಿಸುತ್ತಾರೆ. ಆದರೆ, ಹುಬ್ಬಳ್ಳಿಯಲ್ಲೊಂದು ಫೌಂಡೇಶನ್ ರೋಸ್ ಡೇಯನ್ನ ವಿನೂತನ ಹಾಗೂ ವಿಭಿನ್ನವಾಗಿ ಆಚರಣೆ ಮಾಡುವ ಮೂಲಕ ಗಮನ ಸೆಳೆದಿದೆ.
ವಾಣಿಜ್ಯನಗರಿಯಲ್ಲಿ ವಿಭಿನ್ನ ರೀತಿ ರೋಸ್ ಡೇ.. ಹುಬ್ಬಳ್ಳಿಯ 'ಆಟೋರಕ್ಷಾ ಫೌಂಡೇಶನ್' ಎನ್ನುವ ಸಂಸ್ಥೆ ವಿಭಿನ್ನ ಹಾಗೂ ವಿನೂತನವಾಗಿ ರೋಸ್ ಡೇ ಆಚರಿಸಿದೆ.
ಕೇವಲ ಪ್ರೇಮಿಗಳು ಆಚರಿಸುವಂತ ಪ್ರೇಮಿಗಳ ದಿನಾಚರಣೆ ಮೊದಲ ದಿನವಾದ ರೋಸ್ ಡೇ ಅನ್ನು ಆಟೋರಿಕ್ಷಾ ಫೌಂಡೇಶನ್ ವಿಭಿನ್ನವಾಗಿ ಆಚರಿಸಿತು.
ಆಟೋರಕ್ಷಾ ಫೌಂಡೇಶನ್ ವತಿಯಿಂದ ಈ ಫೆಬ್ರುವರಿಯಲ್ಲಿ ಪ್ರತಿಯೊಂದು ದಿನವನ್ನೂ ವಿಶೇಷ ಮತ್ತು ವಿಶಿಷ್ಟವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ.
ಇಂದು ಮೊದಲ ದಿನವನ್ನು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿಯ ವೃದ್ಧರಿಗೆ ಗುಲಾಬಿ ಹೂವು ನೀಡುವ ಮೂಲಕ ರೋಜ್ ಡೇ ದಿನವನ್ನು ಸಂಭ್ರಮದಿಂದ ಆಚರಿಸಿದರು.