ಹುಬ್ಬಳ್ಳಿ: ದೇವಿ ಆರಾಧನೆಯ ಹೆಸರಿನಲ್ಲಿ ಸ್ವಾಮೀಜಿಯೊಬ್ಬರು ಲಂಗೋಟಿಯಲ್ಲಿಯೇ ನಿಂತು ಪೂಜೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅರೆನಗ್ನವಾಗಿ ಸ್ವಾಮೀಜಿ ಪೂಜೆ; ಭಕ್ತನ ಕುತ್ತಿಗೆಗೆ ಕತ್ತಿ ಇಟ್ಟು ದೇವತಾರಾಧನೆ! - ಅರೆನಗ್ನವಾಗಿ ಪ್ರಣವಾನಂದ ಸ್ವಾಮೀಜಿ ಪೂಜೆ
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೆಮಲ್ಲಾಪುರದಲ್ಲಿರುವ ಶರಣಬಸವೇಶ್ವರ ಮಠದಲ್ಲಿ ರಾತ್ರಿ ವೇಳೆ ಈ ವಿಶಿಷ್ಟ ಪೂಜೆ ನಡೆದಿದೆ ಎನ್ನಲಾಗಿದೆ. ಶತ್ರು ಸಂಹಾರಕ್ಕಾಗಿ ಕೈಯಲ್ಲಿ ಕತ್ತಿ ಹಿಡಿದು ಪೂಜೆಯಲ್ಲಿ ಸ್ವಾಮೀಜಿ ಭಾಗಿಯಾಗಿದ್ದಾರೆ.
ಅರೆನಗ್ನವಾಗಿ ಪೂಜೆ
ಪ್ರಣವಾನಂದ ಸ್ವಾಮೀಜಿ ವಿವಾದಾತ್ಮಕ ಪೂಜೆ ನೆರವೇರಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರದಲ್ಲಿರುವ ಶರಣಬಸವೇಶ್ವರ ಮಠದಲ್ಲಿ ರಾತ್ರಿ ವೇಳೆ ಈ ಪೂಜೆ ನಡೆದಿದೆ ಎನ್ನಲಾಗಿದೆ. ಶತ್ರು ಸಂಹಾರಕ್ಕಾಗಿ ಕೈಯಲ್ಲಿ ಕತ್ತಿ ಹಿಡಿದು ಪೂಜೆಯಲ್ಲಿ ಸ್ವಾಮೀಜಿ ಭಾಗಿಯಾಗಿದ್ದಾರೆ.
ಭದ್ರಕಾಳಿಯ ಆರಾಧನೆ ಹೆಸರಲ್ಲಿ ಲಂಗೋಟಿಯಲ್ಲಿಯೇ ನಿಂತು, ಭಕ್ತನ ಕುತ್ತಿಗೆ ಮೇಲೆ ಕತ್ತಿ ಇಟ್ಟು ಪೂಜೆ ಮಾಡಿದ್ದಾರೆ. ಈ ದೃಶ್ಯ ಭದ್ರಕಾಳಿಯ ಆರಾಧನೆ ಹೀಗೂ ಮಾಡುತ್ತಾರಾ? ಈ ಎಂಬ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.