ಧಾರವಾಡ :ಇಲ್ಲಿನದೊಡ್ಡನಾಯನಕೊಪ್ಪವನ್ನ ನಿರ್ಬಂಧಿತ ಪ್ರದೇಶವ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿದ್ದ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ, ದೊಡ್ಡನಾಯಕನಕೊಪ್ಪ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ.
ದೊಡ್ಡನಾಯಕನಕೊಪ್ಪ ಪ್ರದೇಶವನ್ನು ನಿಯಂತ್ರಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ದೊಡ್ಡನಾಯಕನಕೊಪ್ಪ ಪ್ರದೇಶವನ್ನು ನಿಯಂತ್ರಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ದೊಡ್ಡನಾಯಕನಕೊಪ್ಪ ಪ್ರದೇಶವನ್ನು ನಿಯಂತ್ರಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ದೊಡ್ಡನಾಯನಕೊಪ್ಪ ಸುತ್ತಮುತ್ತಲಿನ 5 ಕಿ.ಮೀ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಹಾಗೂ 1 ಕಿ.ಮೀ ಪ್ರದೇಶವನ್ನು ತೀವ್ರ ನಿಯಂತ್ರಿತ ಪ್ರದೇಶ ಎಂದು ಪರಿಗಣಿಸಲಾಗಿದೆ. ಹೀಗಾಗಿ ಮುಂದಿನ ಆದೇಶದವರೆಗೆ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಈ ಪ್ರದೇಶದಲ್ಲಿ ನಾಲ್ಕರಿಂದ ಐದು ಜನರ ಗುಂಪು ಸೇರುವುದು, ಸಭೆ, ಸಮಾರಂಭ, ಮದುವೆ, ಮೆರವಣಿಗೆ ಹಾಗೂ ಇತರ ಸಮಾರಂಭ, ಜಾತ್ರೆ, ಸಂತೆ, ಧಾರ್ಮಿಕ ಆಚರಣೆ, ಉರುಸ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜಿಲ್ಲಾಡಳಿತ ಹೊರಗಿನ ವ್ಯಕ್ತಿಗಳನ್ನು, ದೊಡ್ಡನಾಯಕನಕೊಪ್ಪ ಪ್ರದೇಶದ ಜನರು ಹೊರ ಹೋಗುವುದು ಹಾಗೂ ಅಲ್ಲಿಗೆ ಒಳ ಬರುವುದನ್ನು ಹಾಗೂ ವಾಹನ ಸಂಚಾರವನ್ನು ಕೂಡ ನಿಷೇಧಿಸಲಾಗಿದೆ.
ಆದರೆ, ಇದು ನಿತ್ಯ ಬಳಕೆ ಮಾಡುವಂತಹ ವಸ್ತುಗಳು, ತರಕಾರಿ ಮಾರುಕಟ್ಟೆಗಳಿಗೆ, ಪರೀಕ್ಷಾ ಕೇಂದ್ರಗಳಿಗೆ ಹಾಗೂ ವಿಶೇಷವಾಗಿ ಶವ ಸಂಸ್ಕಾರ, ಅಂತಿಮ ಯಾತ್ರೆಗೆ ಅನ್ವಯವಾಗುವುದಿಲ್ಲ. ಒಂದು ವೇಳೆ, ಈ ಆದೇಶ ಧಿಕ್ಕರಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಹೊರಡಿಸಿರುವ ಆದೇಶದಲ್ಲಿ ಎಚ್ಚರಿಸಿದ್ದಾರೆ.
ಸೋಂಕು ದೃಢಪಟ್ಟಿರುವ ವ್ಯಕ್ತಿಗಳು ಗುಜರಾತ್ನಿಂದ ಧಾರವಾಡ ನಗರದ ಕೃಷಿ ವಿಶ್ವವಿದ್ಯಾಲಯಕ್ಕೆ ಬಂದಿದ್ದರು. ಅಲ್ಲಿಂದ ಅವರನ್ನು ದೊಡ್ಡ ನಾಯನಕೊಪ್ಪದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿರಿಸಲಾಗಿತ್ತು. ಇಪ್ಪತ್ತು ಜನರ ಪೈಕಿ ಈಗಾಗಲೇ ಒಂಬತ್ತು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.