ಕರ್ನಾಟಕ

karnataka

ETV Bharat / state

ದೊಡ್ಡಮಠದ ಸ್ವಾಮಿ ಅಲ್ಲ, ದೊಡ್ಡಮಟ್ಟದ ಸ್ವಾಮಿ ಆಗ್ಬೇಕೆಂದಿರುವೆ.. ದಿಂಗಾಲೇಶ್ವರ ಶ್ರೀ ಮನದಿಂಗಿತ!

ಈಗ ಬಯಲಿನಲ್ಲಿ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡುವುದಿಲ್ಲ. ಸ್ವಾಮೀಜಿ ಸೇರಿದಂತೆ ಎಲ್ಲ ಭಕ್ತಾಧಿಗಳಿಗೆ ಗಡುವು ಕೊಡುತ್ತಿದ್ದೇನೆ. ಕೊಟ್ಟಿರುವ ಅವಧಿಯಲ್ಲಿ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಡೆಡ್‌ಲೈನ್‌ ನೀಡಿದರು.

sathya dharshan sabha
ಸತ್ಯ ದರ್ಶನ ಸಭೆ

By

Published : Feb 23, 2020, 6:36 PM IST

ಹುಬ್ಬಳ್ಳಿ:ನಾನು ಮೂರುಸಾವಿರ ಮಠದ ಆಸ್ತಿಗೆ ಆಸೆ ಪಟ್ಟಿಲ್ಲ. ಆದರೆ, ನಾನು ಉತ್ತರಾಧಿಕಾರಿ ಎಂದು ಗೊತ್ತಾದ ಮೇಲೆಯೇ ನನ್ನ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳು ನಡೆದಿವೆ. ನಾನು ದೊಡ್ಡ ಮಠದ ಸ್ವಾಮೀಜಿಯಾಗಬೇಕು ಅಂದುಕೊಂಡಿಲ್ಲ. ದೊಡ್ಡಮಟ್ಟದ ಸ್ವಾಮೀಜಿಯಾಗಬೇಕು ಎಂದುಕೊಂಡಿದ್ದೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಮೂಸುಸಾವಿರ ಮಠದ ಎದುರಿಗೆ ದಿಂಗಾಲೇಶ್ವರ ಸ್ವಾಮೀಜಿ ಬೆಂಬಲಿಸಿ ಸೇರಿದ್ದ ಭಕ್ತರು..

ನಗರದಲ್ಲಿಂದು ನೆಹರೂ ಮೈದಾನದಿಂದ ಮೂರುಸಾವಿರ ಮಠದ ವರೆಗೂ ಮೆರವಣಿಗೆ ನಡೆಸಿದ ಬಳಿಕ ಮಾತನಾಡಿದ ಅವರು, ನಾನು ಸ್ವಯಂ ಸನ್ಯಾಸಿಯಾಗಿರುವೆ. ನನ್ನನ್ನು ಯಾರೂ ಕೂಡ ಸನ್ಯಾಸಿಯನ್ನಾಗಿ ಮಾಡಿಲ್ಲ. ಬಾಲೆ ಹೊಸೂರಿನ ಮಠಕ್ಕೆ ನೇಮಕ ಮಾಡಿದಾಗ ಮಠದ ಆರ್ಥಿಕ ಸ್ಥಿತಿ ಸರಿಯಿರಲಿಲ್ಲ. ಆ ಪರಿಸ್ಥಿತಿಯಲ್ಲಿ ನಾನು ಮಠದ ಅಧಿಕಾರ ವಹಿಸಿಕೊಂಡೆ. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ತಿಂಗಳು ಗಂಜಿ ತಿಂದು ಬದುಕಿದ್ದೇನೆ. ಔಷಧ ತರಲೂ ಕೂಡ ಹಣವಿರಲಿಲ್ಲ. ಇಂದು ಕರ್ನಾಟಕವೇ ಗಮನ ಹರಿಸುವಂತೆ ಶ್ರೀಮಠ ಬೆಳೆಸಿರುವೆ ಎಂದರು.

ದೊಡ್ಡಮಟ್ಟದ ಸ್ವಾಮಿಯಾಗಬೇಕು ಎಂದು ಕೊಂಡಿದ್ದೇನೆ ಎಂದ ಅವರು, ಭಕ್ತರ ಸಮ್ಮುಖದಲ್ಲಿ ಮುಗಿಯಬೇಕಿದ್ದ ನ್ಯಾಯವನ್ನು ನ್ಯಾಯಾಲಯದ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮೂರುಸಾವಿರ ಮಠವನ್ನು ಸಿದ್ದಗಂಗಾ ಮಠಕ್ಕಿಂತ ಒಂದು ಕೈ ಹೆಚ್ಚು ಎಂಬಂತೆ ಮೂರುಸಾವಿರ ಮಠವನ್ನು ಬೆಳೆಸಲು ಶಕ್ಯನಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

45 ದಿನದ ಗಡವು ನೀಡಿದ ಸ್ವಾಮೀಜಿ: ನಾನು ಈಗ ಬಯಲಿನಲ್ಲಿ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡುವುದಿಲ್ಲ. ಸ್ವಾಮೀಜಿ ಸೇರಿದಂತೆ ಎಲ್ಲ ಭಕ್ತಾಧಿಗಳಿಗೆ ಗಡುವು ಕೊಡುತ್ತಿದ್ದೇನೆ. ಕೊಟ್ಟಿರುವ ಅವಧಿಯಲ್ಲಿ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಡೆಡ್‌ಲೈನ್‌ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ನೆಹರು ಓಲೇಕಾರ, ಮಾಜಿ ಶಾಸಕ ಜಿ ಎಸ್‌ ಗಡ್ಡದೇವರಮಠ, ಪ್ರಕಾಶ ಬೆಂಡಿಗೇರಿ, ಮಾಂತೇಶ ಗಿರಿಮಠ, ಸಿದ್ದಣ್ಣ ಶೆಟ್ಟರ್, ಡಿ ಟಿ ಪಾಟೀಲ, ಶಿವಾನಂದ ಮುತ್ತಣ್ಣವರ ಸೇರಿದಂತೆ ಮತ್ತಿತರರಿದ್ದರು.

ABOUT THE AUTHOR

...view details