ಕರ್ನಾಟಕ

karnataka

ETV Bharat / state

ವಿದ್ಯಾವರ್ಧಕ ಸಂಘಕ್ಕೆ ಧಾರವಾಡ ಹೈಕೋರ್ಟ್ ನೋಟಿಸ್​ - ಸಾಮಾಜಿಕ ಹೋರಾಟಗಾರ ಮಹಾದೇವ ದೊಡ್ಡಮನಿ

ಚುನಾವಣೆಗೆ ತಡೆಯಾಜ್ಞೆ ಕೋರಿ ಸಾಮಾಜಿಕ ಹೋರಾಟಗಾರ ಮಹಾದೇವ ದೊಡ್ಡಮನಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ಧಾರವಾಡ ಹೈಕೋರ್ಟ್‌ ನೋಟಿಸ್​ ಜಾರಿಗೊಳಿಸಿದೆ.

dharwda-highcourt
ಧಾರವಾಡ ಹೈಕೋರ್ಟ್

By

Published : Nov 11, 2021, 4:06 PM IST

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ತ್ರೈವಾರ್ಷಿಕ ಚುನಾವಣೆ ಹಿನ್ನೆಲೆಯಲ್ಲಿ ಸಮರ್ಪಕ ಉತ್ತರ ನೀಡುವಂತೆ ವಿದ್ಯಾವರ್ಧಕ ಸಂಘಕ್ಕೆ ಧಾರವಾಡ ಹೈಕೋರ್ಟ್ (Dharawada Highcourt) ನೋಟಿಸ್​ ಜಾರಿಗೊಳಿಸಿದೆ.

ಚುನಾವಣೆಗೆ ತಡೆಯಾಜ್ಞೆ ಕೋರಿ ಸಾಮಾಜಿಕ ಹೋರಾಟಗಾರ ಮಹಾದೇವ ದೊಡ್ಡಮನಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ಧಾರವಾಡ ಹೈಕೋರ್ಟ್‌ ನೋಟಿಸ್​ ಜಾರಿಗೊಳಿಸಿದೆ.

ಬೈಲಾ ಪ್ರಕಾರ ಸಂಘದ ನೋಂದಣಿ ಇಲ್ಲ. 2003ರಿಂದ ಬೈಲಾ ನವೀಕರಣಗೊಂಡಿಲ್ಲ. ಸಂಘದಲ್ಲಿ ಮೀಸಲಾತಿ ಜಾರಿಯಾಗಿಲ್ಲ‌. ಈ ಹಿನ್ನೆಲೆಯಲ್ಲಿ ತಡೆಯಾಜ್ಞೆ ಕೋರಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಮೂರು ದಿನದಲ್ಲಿ ಉತ್ತರ ನೀಡುವಂತೆ ಹೈಕೋರ್ಟ್ ಸೂಚಿಸಿದೆ. ನವೆಂಬರ್ 28ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ನಿಗದಿಯಾಗಿತ್ತು. ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಬೇಕಿತ್ತು.

ಇದನ್ನೂ ಓದಿ:ಬಿಟ್ ಕಾಯಿನ್ ತನಿಖೆ ಮಾಡಿದರೆ ಕಾಂಗ್ರೆಸ್‌ನವರೇ ಸಿಕ್ಕಿ ಬೀಳ್ತಾರೆ: ಸಂಸದ ಪ್ರತಾಪ್ ಸಿಂಹ

ABOUT THE AUTHOR

...view details