ಧಾರವಾಡ:ಕ್ಷಯ ರೋಗದಿಂದ ಬಳಲುತ್ತಿದ್ದ ಆಂಧ್ರ ಮೂಲದ ವ್ಯಕ್ತಿಯನ್ನು, ಧಾರವಾಡದಲ್ಲಿ ರಕ್ಷಣೆ ಮಾಡಲಾಗಿದೆ. ಧಾರವಾಡದ ಸಿಬಿಟಿ ಬಳಿ ನರಳುತ್ತ ಬಿದ್ದಿದ್ದ ವ್ಯಕ್ತಿಯನ್ನು ಗಮನಿಸಿದ ಯುವಕರು ಆಸ್ಪತ್ರೆಗೆ ರವಾನಿಸಿದ್ದಾರೆ. ವ್ಯಕ್ತಿ ರಾತ್ರಿಯಿಡಿ ರಸ್ತೆ ಬದಿ ಬಿದ್ದಿದ್ದರು ಎನ್ನಲಾಗಿದ್ದು, ದೇವರಾಜ್, ವಿನಾಯಕ, ಮಂಜುನಾಥ ಎಂಬ ಯುವಕರು ಸಹಾಯ ಮಾಡಿ ಆಹಾರ ನೀಡಿ ಉಪಚರಿಸಿದ್ದಾರೆ.
ರಸ್ತೆ ಬದಿ ಬಿದ್ದಿದ್ದ ಕ್ಷಯರೋಗಿ ರಕ್ಷಿಸಿದ ಧಾರವಾಡದ ಯುವಕರು..! - Dharwad youths who rescued Andhra tuberculosis
ರಸ್ತೆ ಬದಿ ಬಿದ್ದಿದ್ದ ಕ್ಷಯರೋಗಿಯೊಬ್ಬರನ್ನು ಧಾರವಾಡ ಯುವಕರು ರಕ್ಷಣೆ ಮಾಡಿದ್ದಾರೆ. ಆ ವ್ಯಕ್ತಿಗೆಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
![ರಸ್ತೆ ಬದಿ ಬಿದ್ದಿದ್ದ ಕ್ಷಯರೋಗಿ ರಕ್ಷಿಸಿದ ಧಾರವಾಡದ ಯುವಕರು..! Dharwad youths who rescued Andhra tuberculosis](https://etvbharatimages.akamaized.net/etvbharat/prod-images/768-512-6944846-thumbnail-3x2-smk.jpg)
ಆಂಧ್ರದ ಕ್ಷಯರೋಗಿಯನ್ನು ರಕ್ಷಿಸಿದ ಧಾರವಾಡದ ಯುವಕರು
ಆಂಧ್ರದ ಕ್ಷಯರೋಗಿಯನ್ನು ರಕ್ಷಿಸಿದ ಧಾರವಾಡದ ಯುವಕರು
ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ವ್ಯಕ್ತಿಯನ್ನು ಹುಸೇನಿ ಪೀರವಾಲಾ(55) ಎಂದು ಗುರುತಿಸಲಾಗಿದೆ. ವ್ಯಕ್ತಿಯು ಆಂಧ್ರಪ್ರದೇಶದ ಗುಂಟೂರ ನಗರದ ನಿವಾಸಿಯಾಗಿದ್ದು, ಧಾರವಾಡಕ್ಕೆ ಬಂದು ಸಿಲುಕಿಕೊಂಡಿದ್ದರು. ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಯುವಕರ ಮಾನವೀಯ ಕೆಲಸಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.