ಧಾರವಾಡ: ಸಲಿಂಗಕಾಮಿಯ ಕಾಟಕ್ಕೆ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಪವನ್ ಎಂಬಾತನ ಕಿರುಕುಳಕ್ಕೆ ಯಾಸೀನ್ ರೋಟಿವಾಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಯಾಸೀನ್ ರೋಟಿವಾಲೆ ಧಾರವಾಡ ಅತ್ತಿಕೊಳ್ಳದ ನಿವಾಸಿ. ವೃತ್ತಿಯಲ್ಲಿ ಆಟೋ ಡ್ರೈವರ್. ಕಳೆದ ಅಕ್ಟೋಬರ್ 12 ರಂದು ತನ್ನ ಮನೆಯಿಂದ ಹೊರ ಹೋಗಿದ್ದ ಆತ, ಅಕ್ಟೋಬರ್ 15 ರಂದು ಧಾರವಾಡದ ಕೆಲಗೇರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಯಾಸೀನ್ ಹಾಗೂ ಪವನ್ ಮಧ್ಯೆ ಏಳೆಂಟು ತಿಂಗಳಿನಿಂದ ಗೆಳೆತನ ಇತ್ತು. ಈ ಗೆಳೆತನ ಸಲಿಂಗಕಾಮಕ್ಕೂ ಕಾರಣವಾಗಿದೆ. ಅಲ್ಲದೇ ಪವನ್ ಎಲ್ಲರ ಮುಂದೆ ನಾನು ಯಾಸೀನ್‌ನನ್ನು ಮದುವೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದನಂತೆ. ಪವನ್ ಯಾಸೀನ್‌ಗೆ ಪ್ರತಿನಿತ್ಯ ಫೋನ್ ಮಾಡಿ ತನ್ನ ಸಂಪರ್ಕಕ್ಕೆ ಬರುವಂತೆ ಕಿರುಕುಳ ನೀಡುತ್ತಿದ್ದನಂತೆ.