ಧಾರವಾಡ: ಮಳೆ ಹಾನಿಯಿಂದ ಮನೆ ಕಳೆದುಕೊಂಡವರಿಗೆ ನೀಡಲಾಗುವ ಪರಿಹಾರದ ಚೆಕ್ ವಿತರಿಸುವ ವೇಳೆ ಅವ್ಯವಹಾರವೆಸಗಿದ ಆರೋಪದ ಮೇಲೆ ಗ್ರಾಮ ಲೆಕ್ಕಾಧಿಕಾರಿಯನ್ನು ವಜಾಗೊಳಿಸಿದ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ನಡೆದಿದೆ.
ಶಿರೂರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ರಮೇಶ ಮಾನೆ ವಜಾಗೊಂಡ ಅಧಿಕಾರಿ, ನೆರೆ ಪರಿಹಾರ ಚೆಕ್ ನೀಡುವಲ್ಲಿ ಗೋಲ್ ಮಾಲ್ ಕುರಿತು ವರದಿಯಿಂದ ಎಚ್ಚೆತ್ತುಕೊಂಡ ಉಪ ತಹಶೀಲ್ದಾರ್ ಎಂ.ಜೆ. ವರ್ಕಾನಿ ಗ್ರಾಮಕ್ಕೆ ಭೇಟಿ ನೀಡಿ ಅಮಾನತುಗೊಳಿಸಿದ್ದಾರೆ.
ನೆರೆ ಪರಿಹಾರ ಚೆಕ್ ಗೋಲ್ ಮಾಲ್ ಗ್ರಾಮ ಲೆಕ್ಕಾಧಿಕಾರಿ ಸಸ್ಪೆಂಡ್ ಮಳೆಯಿಂದ ಮನೆ ಹಾನಿಯಾದ ಫಲಾನುಭವಿಗಳಿಗೆ ಚೆಕ್ ನೀಡದೆ, ಇತರರಿಗೆ ಪರಿಹಾರ ಧನ ವಿತರಿಸಿದ ಆರೋಪದ ಮೇಲೆ ರಮೇಶ ಮಾನೆಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದ್ದು, ರಮೇಶ ಮಾನೆಯ ಅವ್ಯವಹಾರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು, ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಉಪ ತಹಶಿಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ.
ಇನ್ನು, ಸರಿಯಾದ ಫಲಾನುಭವಿಗಳನ್ನು ಮತ್ತೊಮ್ಮೆ ಸರ್ವೆ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಗ್ರಾಮದಲ್ಲಿ ಹಾನಿಯಾದ ಮನೆ ಮಾಲೀಕರಿಗೆ ಒಂದು ವಾರದಲ್ಲಿ ಚೆಕ್ ನೀಡುವುದಾಗಿ ಉಪ ತಹಸಿಲ್ದಾರ್ ತಿಳಿಸಿದ್ದಾರೆ.