ಕರ್ನಾಟಕ

karnataka

ETV Bharat / state

ಬೈಕ್​ ಸ್ಕಿಡ್​ ಆಗಿ ಧಾರವಾಡ ಸಂಚಾರ ಠಾಣೆ ಪೊಲೀಸ್​ ಸಾವು - Dharwad Traffic Station Police constable death

ನಗರದ ಸಂಚಾರ ಠಾಣೆಯ ಪೊಲೀಸ್ ಕಾನ್​ಸ್ಟೇಬಲ್ ಬೈಕ್​ ಅಪಘಾತದಿಂದಾಗಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

Dharwad Traffic Station Police constable
ಧಾರವಾಡ ಸಂಚಾರ ಠಾಣೆ ಪೊಲೀಸ್​ ಸಾವು

By

Published : Aug 27, 2020, 9:35 PM IST

ಧಾರವಾಡ:ಸಂಚಾರ ಠಾಣೆಯ ಪೊಲೀಸ್ ಕಾನ್​ಸ್ಟೇಬಲ್ ರಾಜು ಕಟಗಿ ಎಂಬುವವರು ಬೈಕ್​​ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ಸ್ಕಿಡ್ ಆದ ಹಿನ್ನೆಲೆ ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾರೆ.

ಅಪಘಾತಕ್ಕೀಡಾದ ಕೂಡಲೇ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ.

1994 ರ ಬ್ಯಾಚಿನ ರಾಜೇಶ ಕಟಗಿ ಅಗಲಿಕೆಯಿಂದಾಗಿ ಧಾರವಾಡದ ಸಂಚಾರ ಠಾಣೆಯಲ್ಲಿ ನೀರವ ಮೌನ ಆವರಿಸಿದಂತಾಗಿದೆ. ರಾಜೇಶ್ ಅವರು ಇಬ್ಬರು ಹೆಣ್ಣು ಮಕ್ಕಳು ಮತ್ತು ಅದೇ ಠಾಣೆಯಲ್ಲಿ ಎಎಸ್ಐ ಆಗಿ ಕೆಲಸ ಮಾಡುತ್ತಿದ್ದ ಪತ್ನಿಯನ್ನು ಅಗಲಿದ್ದಾರೆ.

For All Latest Updates

ABOUT THE AUTHOR

...view details