ಕರ್ನಾಟಕ

karnataka

ETV Bharat / state

ಶಿರಕೋಳ, ಮೊರಬ, ಅಮ್ಮಿನಬಾವಿಯಲ್ಲಿ ಸ್ವಯಂ ಪ್ರೇರಿತ ಲಾಕ್​​​ಡೌನ್ - Self lockdown

ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಗ್ರಾಮಸ್ಥರು ಮನೆಯಲ್ಲೇ ಇರುತ್ತಿದ್ದಾರೆ. ಅಪ್ಪಿತಪ್ಪಿಯೂ ಮನೆಯಿಂದ ಹೊರಗೆ ಬರುತ್ತಿಲ್ಲ..

ಸ್ವಯಂ ಪ್ರೇರಿತ ಲಾಕ್​​​ಡೌನ್
ಸ್ವಯಂ ಪ್ರೇರಿತ ಲಾಕ್​​​ಡೌನ್

By

Published : Jul 8, 2020, 7:33 PM IST

ಧಾರವಾಡ :ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಹಳ್ಳಿಗಳಲ್ಲಿರುವ ಜನರೇ ಸ್ವಯಂ ಪ್ರೇರಿತ ಲಾಕ್‌ಡೌನ್‌ ಜಾರಿ ಮಾಡಿಕೊಳ್ತಾಯಿದ್ದಾರೆ. ಅಷ್ಟರಮಟ್ಟಿಗೆ ಜನ ಜಾಗೃತರಾಗಿದ್ದಾರೆ.

ಕೊರೊನಾ ಸೋಂಕು ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿದೆ. ಈಗಾಗಲೇ ನವಲಗುಂದ ತಾಲೂಕಿನ ಮೊರಬ ಹಾಗೂ ಶಿರಕೋಳ ಗ್ರಾಮಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆ ಆ ಗ್ರಾಮಗಳನ್ನು ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.

ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಗ್ರಾಮಸ್ಥರು ಮನೆಯಲ್ಲೇ ಇರುತ್ತಿದ್ದಾರೆ. ನಿನ್ನೆಯಷ್ಟೇ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಇದೀಗ ಆ ಗ್ರಾಮಸ್ಥರು ಕೂಡ ಸ್ವಯಂ ಪ್ರೇರಿತ ಲಾಕ್​ಡೌನ್ ಮಾಡಿದ್ದಾರೆ.

ABOUT THE AUTHOR

...view details