ಧಾರವಾಡ: ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟವರೆಲ್ಲ ಆಗಾಗ ಪ್ರವಾಸ ಮಾಡುವ ಹವ್ಯಾಸವುಳ್ಳವರು. ಆದರೆ ಇದೇ ಮೊದಲ ಬಾರಿಗೆ ಅವರು ನೈಟ್ ಜರ್ನಿ ಮಾಡಿದ್ದರು ಎಂದು ದುರ್ಘಟನೆಯಲ್ಲಿ ಮೃತಪಟ್ಟ ಡಾ.ಪ್ರೀತಿ ಅವರ ಮೈದುನ ಅರವಿಂದ ಹೇಳಿದರು.
ಇದೇ ಮೊದಲ ಬಾರಿಗೆ ಅವರು ರಾತ್ರಿ ಪ್ರವಾಸ ಮಾಡಿದ್ದರು: ಮೃತರ ಸಂಬಂಧಿ - first night toured held by friends
ಇದೇ ಮೊದಲ ಬಾರಿಗೆ ಅವರೆಲ್ಲರೂ ರಾತ್ರಿ ವೇಳೆ ಪ್ರವಾಸ ಮಾಡಿದ್ದರು ಎಂದು ಮೃತರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಮೃತರ ಸಂಬಂಧಿ ಹೇಳಿಕೆ
ಮಹಿಳಾ ವೈದ್ಯರು ಹಾಗೂ ವೈದ್ಯರ ಪತ್ನಿಯರ ಸ್ನೇಹ ಬಳಗ ಈಗಾಗಲೇ ಸಾಕಷ್ಟು ಬಾರಿ ಪ್ರವಾಸ ಕೈಗೊಂಡಿದ್ದರು. ಈ ಹಿಂದೆ ಒಂದೆರಡು ದಿನಗಳ ಪ್ರವಾಸಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.