ಧಾರವಾಡ: ವೃತ್ತಿಯಿಂದ ನಿವೃತ್ತಿ ಹೊಂದಿದರೂ ಪ್ರವೃತ್ತಿಯತ್ತ ಮನಸ್ಸು ಸೆಳೆಯುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಧಾರವಾಡದಲ್ಲಿ ನಿವೃತ್ತ ಪ್ರಾಧ್ಯಾಪಕರೊಬ್ಬರು ಮನೆ ಮೇಲೆ ಗಾರ್ಡನ್ ಮಾಡಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಹೌದು, ಧಾರವಾಡದ ಆಕಾಶವಾಣಿ ಬಳಿಯಿರುವ ಗಂಗಯ್ಯ ಹಿರೇಮಠ ಎಂಬ ನಿವೃತ್ತ ಪ್ರಾಧ್ಯಾಪಕ, ತಮ್ಮ ಮನೆಯ ಟೆರೆಸ್ನಲ್ಲಿ ವಿವಿಧ ತಳಿಯ ಸಸ್ಯಗಳನ್ನು ಬೆಳೆಸಿ ಗಾರ್ಡನ್ ಮಾಡಿಕೊಂಡು ನಿವೃತ್ತ ಜೀವನ ಕಳೆಯುತ್ತಿದ್ದಾರೆ.
ಧಾರವಾಡದ ಸುತ್ತಮುತ್ತಲಿನ ಸಸಿಗಳು ಹಾಗೂ ಹೊರ ಜಿಲ್ಲೆ-ರಾಜ್ಯಗಳಿಂದ ಸಸಿಗಳನ್ನು ಖರೀದಿಸಿ, ಟೆರೆಸ್ ಮೇಲೆ ಸುಂದರವಾದ ಗಾರ್ಡನ್ ಮಾಡಿಕೊಂಡಿದ್ದಾರೆ. ಸುಮಾರು 300ಕ್ಕೂ ಹೆಚ್ಚು ತಳಿಯ ಸಸ್ಯಗಳನ್ನು ಬೆಳೆಸಿ, ಪಾಲನೆ-ಪೋಷಣೆ ಮಾಡುತ್ತಿದ್ದಾರೆ.