ಧಾರವಾಡ :ಕೊರೊನಾ ಹಿನ್ನೆಲೆ ಜೈಲಿನಲ್ಲಿರುವ ಕೈದಿಗಳಿಗೆ ಅವರ ಕುಟುಂಬದವರನ್ನು ಭೇಟಿಯಾಗಲು ಅವಕಾಶ ಇಲ್ಲದಂತಾಗಿದೆ. ಇದಕ್ಕಾಗಿ ಕಾರಾಗೃಹ ಅಧಿಕಾರಿಗಳು ಹೊಸ ಯೋಜನೆಯೊಂದನ್ನು ಜಾರಿಗೊಳಿಸಿದ್ದಾರೆ.
ಯೋಜನೆ ಕುರಿತು ಜೈಲು ಅಧೀಕ್ಷಕ ಎಂ ಎ ಮರಿಗೌಡ ಅವರು ಮಾಹಿತಿ ನೀಡಿರುವುದು ಕೋವಿಡ್ನಿಂದಾಗಿ ಜೈಲಿನಲ್ಲಿರುವ ಕೈದಿಗಳಿಗೆ ತಮ್ಮ ಕುಟುಂಬಸ್ಥರನ್ನು ನೋಡಲು ಅವಕಾಶ ಇರಲಿಲ್ಲ. ಹೀಗಾಗಿ ಕಳೆದೆಂಟು ತಿಂಗಳಿನಿಂದ ಅವರೆಲ್ಲ ತಮ್ಮ ಮನೆಯವರನ್ನು ನೋಡಲು ಸಾಧ್ಯವಾಗಿರಲಿಲ್ಲ.
ಹೀಗಾಗಿ, ನ್ಯಾಷನಲ್ ಪ್ರಿಸನ್ ಇನ್ಫಾರ್ಮೇಶನ್ ಪೋರ್ಟಲ್ ಎಂಬ ಹೊಸ ಯೋಜನೆಯನ್ನು ಕಾರಾಗೃಹ ಡಿಜಿಪಿ ಅಲೋಕ್ ಮೋಹನ್ ರಾಜ್ಯದಲ್ಲಿ ಜಾರಿಗೆ ತಂದು ಕೈದಿಗಳು ಕುಟುಂಬದ ಮುಖ ನೋಡುವಂತೆ ಮಾಡಿದ್ದಾರೆ.
ಓದಿ: ವಿಧಾನ ಪರಿಷತ್ನಲ್ಲಿನ ಕೋಲಾಹಲಕ್ಕೆ ಕಾಂಗ್ರೆಸ್ ಕಾರಣ: ಸಚಿವ ಕೋಟ ಶ್ರೀನಿವಾಸ್ ಪೂಜಾರಿ
ಈ ಕುರಿತಂತೆ ಜೈಲು ಅಧೀಕ್ಷಕ ಎಂ ಎ ಮರಿಗೌಡ ಮಾತನಾಡಿದ್ದು, ಜೈಲಿನಲ್ಲಿರುವ ಕೈದಿಗಳಿಗೆ ಕೊರೊನಾ ಹರಡಬಾರದೆಂಬ ಉದ್ದೇಶದಿಂದ ಮನೆಯವರ ಭೇಟಿಯನ್ನು ರದ್ದು ಮಾಡಲಾಗಿದೆ. ಕೈದಿಗಳಿಗೆ ಆನ್ಲೈನ್ ಮೂಲಕ ಅವರ ಕುಟುಂಬಸ್ಥರನ್ನು ಭೇಟಿಯಾಗುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಇ-ಮುಲಾಖಾತ್ ಎಂಬ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಯಾರು ಕೈದಿಗಳನ್ನು ಭೇಟಿಯಾಗಲು ಬಯಸುತ್ತಾರೋ ಅವರು ತಮ್ಮ ಎನ್ಐಪಿಪಿ ಸಾಫ್ಟ್ವೇರ್ಗೆ ಲಾಗಿನ್ ಆಗಿ ನೋಂದಣಿ ಮಾಡಿಕೊಳ್ಳಬೇಕು. ಆಗ ಅವರಿಗೆ ನಮ್ಮಿಂದ ಒಟಿಪಿ ಹೋಗುತ್ತದೆ. ನಾವು ಅವರಿಗೊಂದು ಸಮಯ ನಿಗದಿ ಮಾಡಿ ಫೋನ್ನಲ್ಲಿ ವಿಡಿಯೋ ಕಾಲ್ ಮೂಲಕ ಭೇಟಿ ಮಾಡಬಹುದಾಗಿದೆ.
ಈ ಯೋಜನೆಯ ಸಲುವಾಗಿ ಎಲ್ಲಾ ಜೈಲುಗಳಲ್ಲಿ ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಹೊಸ ವ್ಯವಸ್ಥೆಯಿಂದ ಕೈದಿಗಳು ತಮ್ಮವರನ್ನು ನೋಡಿ ಅವರೊಂದಿಗೆ ಮಾತನಾಡುವ ಭಾಗ್ಯ ಪಡೆದುಕೊಂಡಿದ್ದಾರೆ.