ಧಾರವಾಡ:ಹೆದ್ದಾರಿ ಪೊಲೀಸ್ ಗಸ್ತು ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳಿಗೆ ಹಾನಿ ಉಂಟಾಗಿರುವ ಘಟನೆ ಜಿಲ್ಲೆಯ ನವಲಗುಂದ ಪಟ್ಟಣದ ಲಿಂಗರಾಜ ವೃತ್ತದಲ್ಲಿ ನಡೆದಿದೆ.
ಹೆದ್ದಾರಿ ಗಸ್ತು ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ, ಜಖಂ.. - ನವಲಗುಂದ ಪಟ್ಟಣದ ಲಿಂಗರಾಜ ವೃತ್ತ
ರಾಷ್ಟ್ರೀಯ ಹೆದ್ದಾರಿಯಲ್ಲಿ, ಹೆದ್ದಾರಿ ಗಸ್ತಿನ ಪೊಲೀಸ್ ವಾಹನಕ್ಕೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರಿಂದ ಎರಡು ವಾಹನಗಳಿಗೆ ಕೊಂಚ ಹಾನಿ ಸಂಭವಿಸಿದೆ.
ಹೆದ್ದಾರಿ ಗಸ್ತು ಪೊಲೀಸ್ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ
ಓದಿ: ಲಾರಿಯಲ್ಲಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ಹಾಕಿ ಬರ್ಬರ ಹತ್ಯೆ
ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅಜಾಗರೂಕತೆಯ ಚಾಲನೆ ತಪ್ಪಿಸಲು ಹೋದ ಗಸ್ತು ವಾಹನ ಏಕಾಏಕಿ ಬ್ರೇಕ್ ಹೊಡೆದಿದೆ. ಇದರಿಂದ ಹಿಂದೆ ಬರುತ್ತಿದ್ದ ಕಾರು ಹೆದ್ದಾರಿ ಗಸ್ತಿನ ವಾಹನಕ್ಕೆ ಗುದ್ದಿರುವುದರಿಂದ ಹಾನಿಯಾಗಿದೆ. ಈ ಘಟನೆಯಿಂದ ಅರ್ಧ ಗಂಟೆಯವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.