ಧಾರವಾಡ : ತಾಲೂಕಿನ ನುಗ್ಗಿ ಕೇರಿ ಕೋಡಿ ತುಂಬಿ ಹರಿಯುತಿದ್ದು, ಪರಿಣಾಮ ಜನರು ರಸ್ತೆ ಮೇಲೆ ಮೀನು ಹಿಡಿಯುತ್ತಿದ್ದಾರೆ.
ಧಾರವಾಡ ಮಹಾಮಳೆ: ರಸ್ತೆಯಲ್ಲೇ ಮೀನು ಹಿಡಿಯುತ್ತಿರುವ ಜನ - kannada news
ಮಹಾ ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಹಳ್ಳ ಕೊಳ್ಳಗಳು ತುಂಬಿದ್ದು, ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಈ ನಡುವೆ ಸ್ಥಳೀಯ ನಿವಾಸಿಗಳು ಹರಿಯುತ್ತಿರುವ ನೀರಿನ ಮಧ್ಯೆ ಮೀನು ಹಿಡಿಯುವುದರಲ್ಲಿ ನಿರತರಾಗಿದ್ದಾರೆ.

ಧಾರವಾಡ ಮಹಾಮಳೆ: ರಸ್ತೆಯಲ್ಲೇ ಮೀನು ಹಿಡಿಯುತ್ತಿರುವ ಜನ
ಧಾರಾಕಾರ ಮಳೆಯಿಂದ ಧಾರವಾಡ - ಕಲಘಟಗಿ ರಸ್ತೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ.
ಧಾರವಾಡ ಮಹಾಮಳೆ: ರಸ್ತೆಯಲ್ಲೇ ಮೀನು ಹಿಡಿಯುತ್ತಿರುವ ಜನ
ಇದರಿಂದಾಗಿ ರಭಸದಿಂದ ಹರಿಯುತ್ತಿರುವ ನೀರಿನ ಮಧ್ಯೆಯೇ ಸ್ಥಳೀಯರು ಮೀನು ಹಿಡಿಯುವುದರಲ್ಲಿ ನಿರತರಾಗಿರುವ ದೃಶ್ಯ ಅಲ್ಲಲ್ಲಿ ಕಂಡು ಬರುತ್ತಿದೆ.