ಹುಬ್ಬಳ್ಳಿ:ಧಾರವಾಡ ಜಿಲ್ಲೆಯನ್ನ ಮೊದಲು ಕೇಂದ್ರ ಸರ್ಕಾರ ರೆಡ್ ಝೋನ್ ಎಂದು ಘೋಷಣೆ ಮಾಡಿದ್ರು ಸಹ ಕೆಲವೇ ಕೆಲವು ಪಾಸಿಟಿವ್ ಪ್ರಕರಣಗಳ ಮೂಲಕ ಗ್ರೀನ್ ಝೋನ್ ಪಟ್ಟವನ್ನ ಗಿಟ್ಟಿಸಿಕೊಂಡಿತ್ತು. ಆದ್ರೀಗ ಮತ್ತೆ ರೆಡ್ ಝೋನ್ ಆಗುವ ಆತಂಕದಲ್ಲಿದೆ.
ಧಾರವಾಡದಲ್ಲಿ ಸಿಗ್ತಿಲ್ಲ ಸೋಂಕಿತರ ಟ್ರಾವೆಲ್ ಹಿಸ್ಟರಿ: ಆರೋಗ್ಯ ಇಲಾಖೆಗೆ ಹೆಚ್ಚಾದ ತಲೆನೋವು - Corona infected peopels travel history
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಜೂನ್ 3ರಿಂದ ಪತ್ತೆಯಾದ ಕೇಸ್ಗಳ ಟ್ರಾವೆಲ್ ಹಿಸ್ಟರಿಯೇ ಸಿಗದಂತಾಗಿದೆ.
ಹೌದು, ಕೊರೊನಾ ಆತಂಕ ಇದೀಗ ಜಿಲ್ಲೆಯಾದ್ಯಂತ ಮನೆ ಮಾಡಿದ್ದು, ಅದರಲ್ಲೂ ಹಳ್ಳಿಗಳಿಗೂ ಸಹ ಇದು ಕಾಲಿಟ್ಟು ಗ್ರಾಮೀಣ ಹಾಗೂ ನಗರದ ಜನರನ್ನು ಬೆಚ್ಚಿಬೀಳಿಸಿದೆ. ಎರಡು ತಿಂಗಳ ಅಂತರದಲ್ಲಿ 100ರ ಗಡಿ ದಾಟಿದ್ದ ಕೊರೊನಾ ಸಂಖ್ಯೆ ಇದೀಗ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಸಂಖ್ಯೆ ದಾಟಿದ್ದು ಆತಂಕಕ್ಕೆ ಕಾರಣವಾಗಿದೆ. ಜೂನ್ 3ರಿಂದ ಪತ್ತೆಯಾದ ಕೇಸ್ಗಳ ಟ್ರಾವೆಲ್ ಹಿಸ್ಟರಿಯೇ ಸಿಗದಂತಾಗಿದೆ.
ಜಿಲ್ಲೆಯಲ್ಲಿ ಈ ತಿಂಗಳಲ್ಲಿ ಅತಿ ಹೆಚ್ಚು ಕೋವಿಡ್-19 ಕೇಸ್ಗಳು ದೃಢಪಟ್ಟಿದ್ದು, ಅದರಲ್ಲೂ ಹಳ್ಳಿಗಳಲ್ಲಿ ಇದರ ಪ್ರಭಾವ ಹೆಚ್ಚಾಗಿದೆ. ಹೊರ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಜನರು ಕಂಡ ಕಂಡಲ್ಲಿ ಓಡಾಡಿದ್ದು, ನಂತರ ಅವರಿಗೆ ಕೊರೊನಾ ದೃಢಪಟ್ಟಿದೆ. ಆದರೆ ಅವರ ಟ್ರಾವೆಲ್ ಹಿಸ್ಟರಿ ಮಾತ್ರ ಪತ್ತೆಯಾಗುತ್ತಿಲ್ಲ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದು, ನಮ್ಮ ಮಧ್ಯೆಯೇ ಓಡಾಡಿದ್ದ ವ್ಯಕ್ತಿಯನ್ನ ಗುರುತು ಹಚ್ಚೋದು ಹೇಗೆ ಅಂತ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಟ್ರಾವೆಲ್ ಹಿಸ್ಟರಿ ಮೂಲಕ ಅವರ ಜೊತೆಗೆ ಸಂಪರ್ಕ ಇದ್ದ ಜನರನ್ನ ಸಹ ಪತ್ತೆ ಹಚ್ಚೋದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ.