ಕರ್ನಾಟಕ

karnataka

ETV Bharat / state

ಧಾರವಾಡದ ಬಹುಕೋಟಿ ವಂಚನೆ ಪ್ರಕರಣ ಸುಖಾಂತ್ಯದತ್ತ..? - kannadanews

ಧಾರವಾಡದ ಕಲಘಟಗಿಯ ಖಾಸನೀಸ್ ಸೋದರರ ಹರ್ಷ ಎಂಟಟೈರ್ನಮೆಂಟ್ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ವಂಚಿತರಿಗೆ ಕೊನೆಗೂ ನ್ಯಾಯ ಸಿಗುವ ಆಶಾಕಿರಣವೊಂದು ಗೋಚರಿಸಿದೆ.

ಧಾರವಾಡದ ಬಹುಕೋಟಿ ವಂಚನೆ ಪ್ರಕರಣ ಸುಖಾಂತ್ಯದತ್ತ

By

Published : Jun 25, 2019, 4:47 PM IST

ಧಾರವಾಡ: ಎರಡು ವರ್ಷ ಹಳೆಯದಾದ ಧಾರವಾಡದ ಕಲಘಟಗಿಯ ಖಾಸನೀಸ್ ಸೋದರರ ಹರ್ಷ ಎಂಟಟೈರ್ನಮೆಂಟ್ ವಂಚನೆಯ ಪ್ರಕರಣದಲ್ಲಿ ಹಣ ದ್ವಿಗುಣದ ಆಸೆಗೆ ಬಿದ್ದು ಮೋಸ ಹೋದ ಜನರಿಗೆ ಕೊನೆಗೂ ನ್ಯಾಯ ಸಿಗುವ ಲಕ್ಷಣಗಳು ಕಾಣುತ್ತಿವೆ.

ಅಂದಾಜು ಸುಮಾರು 1200 ಕೋಟಿ ವಂಚನೆ ಎನ್ನಲಾಗಿರುವ ಈ ಪ್ರಕರಣದ ಆರೋಪಿಗಳಾಗಿರುವ ಖಾಸನೀಸ್ ಸೋದರರ ಆಸ್ತಿ ಸರ್ಕಾರದ ವಶಕ್ಕೆ ಬಂದಿದೆ. ಕಲಘಟಗಿ ನಗರದಲ್ಲಿ ಸತ್ಯಬೋಧ ಅಲಿಯಾಸ ಹರ್ಷಾ, ಸಂಜೀವ ಹಾಗೂ ಶ್ರೀಕಾಂತ ಖಾಸನೀಸ ಸೋದರರು ಈ ವಂಚನೆಯ ಪ್ರಮುಖ ಆರೋಪಿಗಳಾಗಿದ್ದರು. ಇದನ್ನು ಸಿಐಡಿ‌ ತನಿಖೆಗೊಳಪಡಿಸಿ ಸದ್ಯ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಮತ್ತೊಂದೆಡೆ ಸಿಐಡಿ‌ ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇವರಿಂದ ವಶಪಡಿಸಿಕೊಂಡ ಎಲ್ಲ ಆಸ್ತಿಯನ್ನು ಸರ್ಕಾರದ ಸುಪರ್ದಿಗೆ ವಹಿಸಲಾಗಿದೆ. ಇದರನ್ವಯ ಖಾಸನೀಸ ಸೋದರರ ಆಸ್ತಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಧಾರವಾಡ ಉಪವಿಭಾಗಾಧಿಕಾರಿ ಮುಂದಿನ ಕ್ರಮಕ್ಕೆ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಧಾರವಾಡದ ಬಹುಕೋಟಿ ವಂಚನೆ ಪ್ರಕರಣ ಸುಖಾಂತ್ಯದತ್ತ

ಪ್ರಕರಣದ ಅಡಿಯಲ್ಲಿ 7 ಕೋಟಿ 17 ಲಕ್ಷ ರೂ ನಗದು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ, ಇನ್ನು 7 ಕೆಜಿ ಬೆಳ್ಳಿ, 85 ಗ್ರಾಂ ಚಿನ್ನವನ್ನು ಜಿಲ್ಲಾ ಖಜಾನೆಯಲ್ಲಿಡಲಾಗಿದೆ. ಆರೋಪಿಗಳು ಕಲಘಟಗಿ ತಾಲೂಕಿನ ವಿವಿಧೆಡೆ, ಹುಬ್ಬಳ್ಳಿ ನಗರದಲ್ಲಿ ಹೊಂದಿರುವ ಜಮೀನು, ಬಳ್ಳಾರಿಯಲ್ಲಿನ ನಿವಾಸ ಸಹ ಮುಟ್ಟುಗೋಲು ಹಾಕಿಕೊಂಡಿದ್ದು. ಒಟ್ಟು 21 ಎಕರೆ ಜಮೀನು ಸರ್ಕಾರದ ವಶದಲ್ಲಿದೆ. ಇನ್ನು ಈ ವಿಷಯವಾಗಿ ಆದಷ್ಟು ಬೇಗ ಅಧಿಸೂಚನೆ ಹೊರಡಿಸುವಂತೆ ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ ರಾಜ್ಯ ಸರ್ಕಾರವನ್ನು ಆಗ್ರಹ ಮಾಡುತ್ತಾ ಬಂದಿದ್ದರು.

ABOUT THE AUTHOR

...view details