ಕರ್ನಾಟಕ

karnataka

ETV Bharat / state

ಫಿಫಾ ವರ್ಲ್ಡ್​ ಕಪ್ ಟೂರ್ನಿ: ಅರ್ಹತಾ ಪಂದ್ಯಗಳಿಗೆ ಧಾರವಾಡದ ವೈದ್ಯ ಮೆಡಿಕಲ್ ಆಫಿಸರ್ - FIFA Medical officer

ಮುಂದಿನ ವರ್ಷ ನಡೆಯಲಿರುವ ಫಿಫಾ ಫುಟ್ಬಾಲ್ ಟೂರ್ನಿಯ ಎರಡು ಅರ್ಹತಾ ಪಂದ್ಯಗಳಿಗೆ ಧಾರವಾಡದ ವೈದ್ಯರೊಬ್ಬರು ಮೆಡಿಕಲ್ ಆಫಿಸರ್ ಆಗಿ ನೇಮಕವಾಗಿದ್ದಾರೆ.

Dr. Kiran Kulkarni
ಡಾ.ಕಿರಣ್ ಕುಲಕರ್ಣಿ

By

Published : Oct 4, 2021, 11:51 AM IST

ಧಾರವಾಡ: 2022ರ ಫಿಫಾ ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಟೂರ್ನಿ ಆಯೋಜಿಸಲು ಆತಿಥ್ಯ ವಹಿಸಿಕೊಂಡಿರುವ ಕತಾರ್​ನಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.

ಈ ಪಂದ್ಯಾವಳಿ ಆರಂಭಕ್ಕೂ ಮುನ್ನ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯಗಳಿಗೆ ವೈದ್ಯಕೀಯ ಅಧಿಕಾರಿಯಾಗಿ ಧಾರವಾಡದ ಡಾ.ಕಿರಣ್ ಕುಲಕರ್ಣಿ ನೇಮಕವಾಗಿದ್ದಾರೆ.

ಕತಾರ್‌ನಿಂದ ಮಾತನಾಡಿರುವ ಧಾರವಾಡದ ವೈದ್ಯ ಡಾ.ಕಿರಣ್ ಕುಲಕರ್ಣಿ

ಇವರು ಅಕ್ಬೋಬರ್‌ 7ರಿಂದ ನಡೆಯಲಿರುವ ಕೊನೆಯ ಹಂತದ ಅರ್ಹತಾ ಪಂದ್ಯಗಳಿಗೆ ಭಾರತದಿಂದ ಆಯ್ಕೆಯಾದ ಏಕೈಕ ವೈದ್ಯಕೀಯ ಅಧಿಕಾರಿ.

ಡಾ.ಕಿರಣ್ ಕುಲಕರ್ಣಿ

ಅಕ್ಟೋಬರ್ 7ರಂದು ಇರಾಕ್ ಮತ್ತು ಲೆಬನಾನ್ ನಡುವೆ ಹಾಗೂ 12ರಂದು ಇರಾನ್ ಮತ್ತು ದಕ್ಷಿಣ ಕೋರಿಯಾ ನಡುವೆ ನಡೆಯುವ ಏಷ್ಯಾ ವಲಯದ ಪ್ರಾಥಮಿಕ ಸುತ್ತಿನ ಪಂದ್ಯಗಳಿಗೆ ಡಾ. ಕಿರನ್​ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ವೇಳೆ ಅವರು ಡೋಪಿಂಗ್ ಕಂಟ್ರೋಲರ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಾರೆ. ಡಾ.ಕಿರಣ್ ಕುಲಕರ್ಣಿ ಈ ಹಿಂದೆಯೂ ಸಹ ಅನೇಕ ಅಂತಾರಾಷ್ಟ್ರೀಯ ಟೂರ್ನಿಗಳಿಗೆ ವೈದ್ಯಾಧಿಕಾರಿಯಾಗಿ ಕೆಲಸ ಮಾಡಿದ್ದರು.

ಡಾ.ಕಿರಣ್ ಕುಲಕರ್ಣಿ

ಇದನ್ನೂ ಓದಿ:ಎಚ್ಚೆತ್ತ ಹು-ಧಾ ಪಾಲಿಕೆ: ಶಿಥಿಲಾವಸ್ಥೆಯ ಕಟ್ಟಡದಲ್ಲಿರುವ ಅಂಗಡಿ ತೆರವಿಗೆ ನೋಟಿಸ್​

ABOUT THE AUTHOR

...view details