ಕರ್ನಾಟಕ

karnataka

ETV Bharat / state

ಧಾರವಾಡ ಜಿಲ್ಲಾದ್ಯಂತ ಲಾಕ್​ಡೌನ್ : ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ​ - coronavirus news

ಧಾರವಾಡ ಜಿಲ್ಲೆಯಲ್ಲಿ ಇಂದು ರಾತ್ರಿ 12 ಗಂಟೆಯಿಂದ ಜುಲೈ 24 ರ ವರೆಗೆ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಸಲೂನ್ ಶಾಪ್ ಇರಲ್ಲ. ಜಿಲ್ಲೆಯಿಂದ ಯಾರಾದರೂ ಹೊರಗೆ ಹೋದರೆ 10 ದಿನ ವಾಪಸ್ ಬರಲು ಅವಕಾಶ ಇರಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ನಿತೇಶ ಪಾಟೀಲ
ಜಿಲ್ಲಾಧಿಕಾರಿ ನಿತೇಶ ಪಾಟೀಲ

By

Published : Jul 15, 2020, 10:48 PM IST

ಧಾರವಾಡ: ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಕಾರಣ ಲಾಕ್​ಡೌನ್ ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು‌ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.

ಲಾಕ್​ಡೌನ್​ಗೆ ಸಾರ್ವಜನಿಕರು ಸಹಕರಿಸಬೇಕು. ಬೆಳಗ್ಗೆ 5ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ತರಕಾರಿ, ದಿನಸಿ, ಹಾಲು ಹಾಗೂ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ‌ ಕಲ್ಪಿಸಲಾಗಿದೆ. ಕುಟುಂಬದ ಒಬ್ಬರು ಮಾತ್ರ ಖರೀದಿಗೆ ಹೊರಗೆ ಬರಬಹುದು. ಕೈಗಾರಿಕೆಗಳಿಗೆ ಒಂದು ಶಿಫ್ಟ್ ಮಾತ್ರ ಕೆಲಸ ಮಾಡಬಹುದು.‌ ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ.‌ ಬೀಜ, ರಸಗೊಬ್ಬರ ಮಾರಾಟಕ್ಕೆ ಅವಕಾಶ, ಬ್ಯಾಂಕ್, ಎಟಿಎಂ ಒಪನ್ ಇರುತ್ತವೆ. ಮದುವೆ, ಸಭೆ, ಸಮಾರಂಭಕ್ಕೆ ಅವಕಾಶ ನೀಡಲಾಗಿಲ್ಲ. ಎಲ್ಲಾ ಪ್ರಾರ್ಥನಾ ಮಂದಿರಗಳು ಸಂಪೂರ್ಣ ಬಂದ್ ‌ಆಗಲಿವೆ ಎಂದು ತಿಳಿಸಿದ್ದಾರೆ.

ಧಾರವಾಡ ಜಿಲ್ಲಾದ್ಯಂತ ಲಾಕ್​ಡೌನ್

ವೃದ್ಧರು, 10 ವರ್ಷದ ಒಳಗಿನ ಮಕ್ಕಳು ಗರ್ಭಿಣಿಯರು ಹೊರಗೆ ಬರುವಂತಿಲ್ಲ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ 50%ರಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡಬಹುದು.‌ ಜಿಲ್ಲೆಯ ಒಳಗೆ ಬಸ್ ಇರಲ್ಲ. ಹೊರ ಜಿಲ್ಲೆಯ ಬಸ್ ಮಾತ್ರ ಇರುತ್ತವೆ.‌ ಆದರೆ ಜಿಲ್ಲೆಯ ಪ್ರಯಾಣಿಕರಿಗೆ ಹೊರ ಜಿಲ್ಲೆಗೆ ಹೋಗಲು ಮತ್ತು ಬರಲು ಅವಕಾಶ ಇಲ್ಲ. ಹೋಟೆಲ್​ಗಳಲ್ಲಿ ಪಾರ್ಸಲ್ ಸೌಲಭ್ಯ ಮಾತ್ರ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇಂದು ರಾತ್ರಿ 12 ಗಂಟೆಯಿಂದ ಜುಲೈ 24ರ ವರೆಗೆ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಸಲೂನ್ ಶಾಪ್ ಇರಲ್ಲ. ಜಿಲ್ಲೆಯಿಂದ ಯಾರಾದರು ಹೊರಗೆ ಹೋದರೆ 10 ದಿನ ವಾಪಸ್ ಬರಲು ಅವಕಾಶ ಇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details