ಧಾರವಾಡ: ಜಿಲ್ಲೆಯ 63,566 ಜನ ರೈತರಿಗೆ 50.298 ಕೋಟಿ ರೂ.ಗಳ ಮಧ್ಯಂತರ ವಿಮೆ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಗರುದತ್ತ ಹೆಗಡೆ ತಿಳಿಸಿದ್ದಾರೆ. 2023 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆ ಧಾರವಾಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಭತ್ತ, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಕೆಂಪು ಮೆಣಸಿನಕಾಯಿ ಮತ್ತು ಆಲೂಗಡ್ಡೆ ಬೆಳೆಗಳಡಿ ನೋಂದಾಯಿಸಿಕೊಂಡ ರೈತರಿಗೆ ಮಧ್ಯಂತರ ವಿಮೆ ಜಮಾವಣೆ ಪ್ರಾರಂಭವಾಗಿದೆ.
ಅಳ್ನಾವರ ತಾಲೂಕಿನ 3,052 ಜನ ರೈತರಿಗೆ 1.82 ಕೋಟಿ ರೂ.ಗಳ, ಅಣ್ಣಿಗೇರಿ ತಾಲೂಕಿನ 6,044 ಜನ ರೈತರಿಗೆ 6.45 ಕೋಟಿ ರೂ. ಗಳ, ಧಾರವಾಡ 9,978 ಜನ ರೈತರಿಗೆ 6.575 ಕೋಟಿ ರೂ. ಗಳ, ಹುಬ್ಬಳ್ಳಿ ತಾಲೂಕಿನ 9,472 ಜನ ರೈತರಿಗೆ 9.12 ಕೋಟಿ ರೂ. ಗಳ, ಹುಬ್ಬಳ್ಳಿ ನಗರ ತಾಲೂಕಿನ 301 ಜನ ರೈತರಿಗೆ 36.5 ಲಕ್ಷ ರೂ.ಗಳ, ಕಲಘಟಗಿ ತಾಲೂಕಿನ 15,248 ಜನ ರೈತರಿಗೆ 9.731 ಕೋಟಿ ರೂ. ಗಳ ಮತ್ತು ನವಲಗುಂದ ತಾಲೂಕಿನ 5,286 ಜನ ರೈತರಿಗೆ 5.282 ಕೋಟಿ ರೂ. ಗಳ ಮಧ್ಯಂತರ ವಿಮಾ ಪರಿಹಾರ ಜಮಾವಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.