ಹುಬ್ಬಳ್ಳಿ:ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಇತ್ತ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅದರಂತೆ ಕೊರೊನಾ ತಡೆಗಟ್ಟುವುದರ ಬಗ್ಗೆ ಕಿಮ್ಸ್ ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ಹಿಂದಿನ ವರ್ಷ ಇದೇ ತಿಂಗಳು ಕೊರೊನಾ ಹಂತ ಹಂತವಾಗಿ ಜಿಲ್ಲೆಗೆ ಕಾಲಿಟ್ಟಿತ್ತು. ಆಗ ಎಚ್ಚತ್ತುಕೊಂಡು ಸರ್ಕಾರದ ಆದೇಶದಂತೆ ದೇಶವನ್ನೇ ಲಾಕ್ಡೌನ್ ಮಾಡಿ ಕೊರೊನಾ ತಡೆಗಟ್ಟುವ ಕೆಲಸ ಮಾಡಲಾಗಿತ್ತು. ಈಗ ಮತ್ತೆ ಎರಡನೇ ಅಲೆ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿರುವ ಹಿನ್ನೆಲೆ ಕೊರೊನಾ ತಡೆಗಟ್ಟಲು ಕಿಮ್ಸ್ ಆಡಳಿತ ಮಂಡಳಿ ಸನ್ನದ್ಧವಾಗಿದೆ. ಇನ್ನು ಬೇರೆ ಜಿಲ್ಲೆಯಿಂದ ಬಂದಂತಹ ರೋಗಿಗಳಿಗೆ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ಹಾಗೂ ತಪಾಸಣೆ ನಡೆಸಲಾಗುತ್ತಿದೆ.
ಕೊರೊನಾ 2ನೇ ಅಲೆ ತಡೆಯಲು ಜಿಲ್ಲಾಡಳಿತ ಚಿಂತನೆ ಇನ್ನು ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕಲಬುರಗಿ ಜಿಲ್ಲೆಯ ಮೇಲೆ ಇದು ಪ್ರಭಾವ ಬೀರುತ್ತಿದ್ದು, ಈಗ ಜಿಲ್ಲೆಯಲ್ಲೂ ಆತಂಕ ಶುರುವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಮತ್ತೆ ಕೊರೊನಾ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಎಲ್ಲರೂ ಸಹ ಕೊರೊನಾ ವಿರುದ್ಧ ಸೆಣಸಾಡಬೇಕಾದ ಪ್ರಸಂಗ ಬಂದೊದಗಿದೆ.
ಓದಿ : ಚಿಕ್ಕಬಳ್ಳಾಪುರಕ್ಕೆ ಬಂದ 'ದಿ ಗ್ರೇಟ್ ಖಲಿ'... ನೆಚ್ಚಿನ ಕುಸ್ತಿಪಟು ನೋಡಲು ಅಭಿಮಾನಿಗಳ ನೂಕುನುಗ್ಗಲು!
ಒಟ್ಟಿನಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಜಿಲ್ಲಾಡಳಿತ ಸೇರಿದಂತೆ ಕಿಮ್ಸ್ ಆಡಳಿತ ಮಂಡಳಿ ಎಲ್ಲ ರೀತಿಯಿಂದಲೂ ರೆಡಿಯಾಗಿದ್ದು, ಇದರಂತೆ ಸಾರ್ವಜನಿಕರು ಸಹ ಎಚ್ಚತ್ತುಕೊಂಡರೆ ಎರಡನೇ ಅಲೆ ತಡೆಗಟ್ಟಬಹುದು ಎಂಬುದು ವೈದ್ಯರ ಸಲಹೆಯಾಗಿದೆ.