ಕರ್ನಾಟಕ

karnataka

ETV Bharat / state

ಧಾರವಾಡ ಜಿಲ್ಲಾಡಳಿತದ ಸಹಾಯದಿಂದ ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿದ ಬಾಲಕಿಯರು! - Dharwad District Administration

ಲಾಕ್​ಡೌನ್ ಜಾರಿಯಿಂದಾಗಿ ದೂರದ ರಾಜಸ್ಥಾನದಲ್ಲಿದ್ದ ತಮ್ಮ ಪಾಲಕರನ್ನು ಸೇರಲಾಗದೇ ಆತಂಕಕ್ಕೀಡಾಗಿದ್ದ ಇಬ್ಬರು ಬಾಲಕಿಯರನ್ನು ಧಾರವಾಡ ಜಿಲ್ಲಾಡಳಿತ ಮರಳಿ ಹೆತ್ತ ತಂದೆ-ತಾಯಿ ಬಳಿಗೆ ಕಳುಹಿಸಿದೆ.

Childrens belonging to  parents
ಧಾರವಾಡ ಜಿಲ್ಲಾಡಳಿತದ ಸಹಾಯದಿಂದ ಹೆತ್ತವರ ಮಡಿಲು ಸೇರಿದ ಮಕ್ಕಳು

By

Published : May 9, 2020, 6:23 PM IST

ಧಾರವಾಡ:ಲಾಕ್​​ಡೌನ್ ಜಾರಿಯಿಂದಾಗಿ ದೂರದ ರಾಜಸ್ಥಾನದಲ್ಲಿದ್ದ ತಮ್ಮ ಪಾಲಕರನ್ನು ಸೇರಲಾಗದೆ ಆತಂಕಕ್ಕೀಡಾಗಿದ್ದ 10 ವರ್ಷದ ರೋಮುಕುಮಾರಿ ಹಾಗೂ 8 ವರ್ಷದ ಪೋಸುಕುಮಾರಿ ಎಂಬ ಇಬ್ಬರು ಬಾಲಕಿಯರು ಶುಕ್ರವಾರ ರಾತ್ರಿ ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೆಮಂಡ್ವಾರ ಗ್ರಾಮದಲ್ಲಿರುವ ತಮ್ಮ ಹೆತ್ತ ತಂದೆ-ತಾಯಿಯ ಮಡಿಲು ಸೇರಿದ್ದಾರೆ.

ರಾಜಸ್ಥಾನದ ಸಿರೋಹಿ ಜಿಲ್ಲಾಧಿಕಾರಿ ಭಗವತಿ ಪ್ರಸಾದ್​ ಬರೆದ ಪತ್ರ
50 ದಿನಗಳಿಂದ ಹೆತ್ತವರಿಂದ ಅಗಲಿದ್ದ ಈ ಮಕ್ಕಳನ್ನು ಅವರ ಪಾಲಕರೊಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ಶಹರ ತಹಶೀಲ್ದಾರ ಶಶಿಧರ ಮಾಡ್ಯಾಳ ಸೇರಿದಂತೆ ಹಲವರು ವಿಶೇಷ ಪ್ರಯತ್ನ ಮಾಡಿದ್ದರು. ಮೇ 7ರಂದು ಜಿಲ್ಲಾಧಿಕಾರಿಗಳು ಶುಭ ಹಾರೈಸಿ ಮಕ್ಕಳನ್ನು ಬೀಳ್ಕೊಟ್ಟಿದ್ದರು.

ಇನ್ನು ಮಕ್ಕಳು ತಲುಪಿರುವ ಕುರಿತು ರಾಜಸ್ಥಾನದ ಸಿರೋಹಿ ಜಿಲ್ಲಾಧಿಕಾರಿ ಭಗವತಿ ಪ್ರಸಾದ್​, ಧಾರವಾಡ ಜಿಲ್ಲಾಧಿಕಾರಿಗಳಿಗೆ ಪತ್ರ ಸಹ ಬರೆದಿದ್ದಾರೆ.

ABOUT THE AUTHOR

...view details