ಹುಬ್ಬಳ್ಳಿ :ಪಾಲಿಕೆ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿಕೊಂಡಿರುವ ಹಾಗೂ ಲೀಸ್ ಅವಧಿ ಮುಗಿದರೂ ಪಾಲಿಕೆ ಆಸ್ತಿ ಬಳಕೆ ಮಾಡಿಕೊಂಡವರಿಗೆ ಬಿಸಿ ಮುಟ್ಟಿಸಲು ಜಿಲ್ಲಾಡಳಿತದ ನೇತೃತ್ವದಲ್ಲಿ ಹು-ಧಾ ಮಹಾನಗರ ಪಾಲಿಕೆ ಮುಂದಾಗಿದೆ.
ಹುಬ್ಬಳ್ಳಿ- ಧಾರವಾಡ ನಗರದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ಹಾಗೂ ಪಾರ್ಕಿಂಗ್ ಕಾರ್ಯಾಚರಣೆ ಬಳಿಕ ಇದೀಗ ಜಿಲ್ಲಾಡಳಿತ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಪಾಲಿಕೆ ಆಸ್ತಿಯಲ್ಲಿ ಮನೆ ಹಾಗೂ ಇನ್ನಿತರ ಕಟ್ಟಡಗಳನ್ನು ಕಟ್ಟಿಕೊಂಡಿರುವ ಹಾಗೂ ಲೀಸ್ ಅವಧಿ ಮುಗಿದರೂ, ಉಪಯೋಗಿಸುತ್ತಿರುವ ಆಸ್ತಿಗಳನ್ನು ಗುರುತಿಸಿ, ಸಂಬಂಧಪಟ್ಟವರಿಗೆ ನೋಟಿಸ್ ನೀಡುವಂತೆ ಜಿಲ್ಲಾಡಳಿತ ಪಾಲಿಕೆಗೆ ಸೂಚಿಸಿದೆ.