ಧಾರವಾಡ: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಆಡಳಿತಕ್ಕಾಗಿ ಎರಡು ಬಣಗಳ ತಿಕ್ಕಾಟ ನಡೆದಿದ್ದು, ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ ತಂದು ವಕೀಲರು ಹಾಜರುಪಡಿಸಿದರು ಸಹ ಇನ್ವರ್ಡ್‌ನಲ್ಲಿ ಆದೇಶದ ಪ್ರತಿ ನೀಡುವಂತೆ ಆಡಳಿತ ಮಂಡಳಿ ಪಟ್ಟು ಹಿಡಿದಿದ್ದು, ಎರಡು ಬಣಗಳ ನಡುವೆ ತಿಕ್ಕಾಟ ಶುರುವಾಗಿದೆ.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಆಡಳಿತಕ್ಕಾಗಿ ಎರಡು ಬಣಗಳ ನಡುವೆ ತಿಕ್ಕಾಟ 2020 ಜನವರಿಯಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಚುನಾವಣೆ ನಡೆದಿತ್ತು. 78 ಜನ ಸದಸ್ಯರಿರುವ ಪ್ರಚಾರ ಸಭಾವನ್ನು ಕೇಂದ್ರ ಸರ್ಕಾರ ಈ ಹಿಂದೆ ಸೂಪರ್ ಸೀಡ್ ಮಾಡಿತ್ತು. ಮೇ 2020 ರಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿತ್ತು. ಅಧ್ಯಕ್ಷರಾಗಿ ಈರೇಶ ಅಂಚಟಗೇರಿ ಅಧಿಕಾರ ಸ್ವೀಕರಿಸಿದ್ದರು.
ಆದರೆ, ಇದನ್ನು ವಿರೋಧಿಸಿ 13 ಸದಸ್ಯರು, ಆಡಳಿತದಲ್ಲಿರುವ ಅನೇಕರು ಪ್ರಚಾರ ಸಭೆಯ ಸದಸ್ಯರೇ ಅಲ್ಲ ಹೀಗಾಗಿ ಹಿಂದಿನ ಆಡಳಿತ ಮಂಡಳಿಗೆ ಅಧಿಕಾರ ನೀಡುವಂತೆ ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ, ಹೈಕೋರ್ಟ್‌ನಿಂದ ವಕೀಲರು ಮಧ್ಯಂತರ ತಡೆಯಾಜ್ಞೆ ತಂದು ಹಾಜರುಪಡಿಸಿದ್ದಾರೆ. ಆದರೆ, ಆಡಳಿತ ಮಂಡಳಿ ಮಾತ್ರ ಇನ್ವರ್ಡ್‌ನಲ್ಲಿ ಆದೇಶದ ಪ್ರತಿ ನೀಡಿ ಎಂದು ಪಟ್ಟು ಹಿಡಿದಿದೆ.
ಅಲ್ಲದೇ, ಚೆನ್ನೈನಿಂದ ಆದೇಶ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ನಾವೇನೂ ಹೇಳೋದಿಲ್ಲ ಅಂತಾ ಆಡಳಿತ ಮಂಡಳಿಯವರು ಪಟ್ಟು ಹಿಡಿದಿದ್ದಾರೆ. ಇದರಿಂದ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದವರು ಮತ್ತು ಆಡಳಿತ ಮಂಡಳಿಯವರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಕಚೇರಿ ನಿಯಮದಂತೆ ಇನ್ವರ್ಡ್‌ನಲ್ಲಿ ಪ್ರತಿ ನೀಡುವಂತೆ ಆಡಳಿತ ಮಂಡಳಿ ಕೇಳಿದೆ. ಇಲ್ಲಾ ಇದು ಕೋರ್ಟ್ ಆದೇಶ ನೀವೇ ಪಡೆಯಬೇಕು ಅಂತಾ ವಕೀಲರು ಹೇಳಿದ್ದಾರೆ. ವಕೀಲರೊಂದಿಗೆ ಕೋರ್ಟ್ ಮೊರೆ ಹೋಗಿದ್ದ ಸದಸ್ಯರು ಹಾಜರಾಗಿದ್ದು, ಇದರಿಂದ ಎರಡೂ ಬಣಗಳ ನಡುವೆ ತಿಕ್ಕಾಟ ಶುರುವಾಗಿದೆ. ಸ್ಥಳಕ್ಕೆ ಎಸಿಪಿ ಅನೂಷಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.