ಕರ್ನಾಟಕ

karnataka

ETV Bharat / state

ನ್ಯೂಯಾರ್ಕ್​ನಲ್ಲಿರುವ ಧಾರವಾಡ ಮೂಲದ ದಂಪತಿ ಕೊಡುಗೆ: ಕೋವಿಡ್ ವಾರ್ಡ್ ನಿರ್ಮಾಣಕ್ಕೆ ಸಿದ್ಧತೆ - ಧಾರವಾಡ

ಕೋವಿಡ್ ವಾರ್ಡ್ ರವಿ ಮತ್ತು ಜಯಾ ಭೂಪಳಾಪುರ ಅವರ ಹೆಸರಿನಲ್ಲಿ ನಿರ್ಮಾಣಗೊಳ್ಳಲಿದೆ. ಭೂಪಳಾಪುರ ದಂಪತಿ ಧಾರವಾಡಕ್ಕೆ ನೀಡಿರುವ ಕೊಡುಗೆ ಅಪಾರ.

ಧಾರವಾಡ ಮೂಲದ  ರವಿ ಮತ್ತು ಜಯಾ ದಂಪತಿ
ಧಾರವಾಡ ಮೂಲದ ರವಿ ಮತ್ತು ಜಯಾ ದಂಪತಿ

By

Published : Aug 27, 2020, 2:11 PM IST

ಧಾರವಾಡ: ನ್ಯೂಯಾರ್ಕ್​ನಲ್ಲಿ ವಾಸವಾಗಿರುವ ಧಾರವಾಡ ಮೂಲದ ರವಿ ಮತ್ತು ಜಯಾ ದಂಪತಿ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ ಸ್ಥಾಪಿಸಿಲು 32.30 ಲಕ್ಷ ರೂ. ನೀಡಿದ್ದಾರೆ ಎಂದು ಡಾ.‌ ಕವನ ದೇಶಪಾಂಡೆ ಹೇಳಿದರು.

ಧಾರವಾಡದ ರೋಟರಿ ಕ್ಲಬ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್​ನ ಮಾಜಿ ಅಧ್ಯಕ್ಷ ಡಾ. ಕವನ ದೇಶಪಾಂಡೆ ಮತ್ತು ಕಿರಣ್ ಹಿರೇಮಠ ನೇತೃತ್ವದಲ್ಲಿ ಹಾಗೂ ರೋಟರಿ ಫೌಂಡೇಶನ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಲೊಜಿಸ್ಸಿಮೊ ಇಂಡಿಯಾ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳಲಿದೆ ಎಂದರು.

ಕೋವಿಡ್ ವಾರ್ಡ್ ರವಿ ಮತ್ತು ಜಯಾ ಭೂಪಳಾಪುರ ಅವರ ಹೆಸರಿನಲ್ಲಿ ನಿರ್ಮಾಣಗೊಳ್ಳಲಿದೆ. ಭೂಪಳಾಪುರ ದಂಪತಿ ಧಾರವಾಡಕ್ಕೆ ನೀಡಿರುವ ಕೊಡುಗೆ ಅಪಾರ. ಧಾರವಾಡದ ಜನತೆಯ ಸೇವೆಯಲ್ಲಿ ಇವರು ಸದಾ ಸಿದ್ಧವಾಗಿದ್ದಾರೆ. ಈ ಹಿಂದೆ ಕೂಡಾ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದರು.

ABOUT THE AUTHOR

...view details