ಕರ್ನಾಟಕ

karnataka

ETV Bharat / state

ಧಾರವಾಡ ಕಟ್ಟಡ ಕುಸಿತ ಪ್ರಕರಣ... ಮನೆ ವಿನ್ಯಾಸಕಾರನ ಲೈಸನ್ಸ್ ರದ್ದು - undefined

ಕೆಲ ದಿನಗಳ ಹಿಂದೆ ಧಾರವಾಡದಲ್ಲಿ ಬಹುಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ವಿನ್ಯಾಸಗಾರನ ಪರವಾನಿಗೆಯನ್ನು ಮಹಾನಗರ ಪಾಲಿಕೆ ರದ್ದು ಮಾಡಿದೆ.

ಧಾರವಾಡ ಕಟ್ಟಡ ಕುಸಿತ

By

Published : Mar 29, 2019, 10:14 AM IST

ಹುಬ್ಬಳ್ಳಿ: ಧಾರವಾಡ ಕುಮಾರೇಶ್ವರ ನಗರದಲ್ಲಿ ಬಹುಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ವಿನ್ಯಾಸಕಾರ ವಿವೇಕ ಪವಾರ್ ಲೈಸನ್ಸ್ ರದ್ದು ಮಾಡಿ ಮಹಾನಗರ ಪಾಲಿಕೆ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಧಾರವಾಡ ಕಟ್ಟಡ ಕುಸಿತ

ಕಟ್ಟಡ ದುರಂತ ಪ್ರಕರಣದಲ್ಲಿ ವಿನ್ಯಾಸಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಪಾಲಿಕೆ ಅವರ ಲೈಸನ್ಸ್ ರದ್ದುಪಡಿಸಿದೆ. ಅಲ್ಲದೇ, ಧಾರವಾಡದ ಯು ಬಿ ಹಿಲ್ ಪ್ರದೇಶದಲ್ಲಿ ನಿರ್ಮಿಸಿದ್ದ ವಸತಿ ಕಟ್ಟಡವನ್ನೂ ಸಹ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲವೆಂದು ಅವರ ಪರವಾನಿಗೆ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮನೆ ಮಾಲೀಕರು, ಸಾರ್ವಜನಿಕರು, ವಿವೇಕ ಪವಾರ್ ಹತ್ತಿರ ಯಾವುದೇ ರೀತಿಯ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಮಹಾನಗರ ಪಾಲಿಕೆ ಇಂಜಿನಿಯರಿಂಗ್ ವಿಭಾಗದ ಅಧೀಕ್ಷಕರು ಪ್ರಕಟಣೆ ಹೊರಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details