ಕರ್ನಾಟಕ

karnataka

ETV Bharat / state

ಧಾರವಾಡ ಕಟ್ಟಡ ದುರಂತಕ್ಕೆ ಒಂದು ವರ್ಷ: ಅಂಗಡಿ ಮಾಲೀಕರಿಗೆ ಇನ್ನೂ ಸಿಗದ ಪರಿಹಾರ - ಬಹುಮಹಡಿ ಕಟ್ಟಡ ದುರಂತ ಪ್ರಕರಣ

ಧಾರವಾಡ ನಗರದ ಕುಮಾರೇಶ್ವರದಲ್ಲಿದ್ದ ಬಹುಮಹಡಿ ಕಟ್ಟಡ ದುರಂತ ನಡೆದು ಇಂದಿಗೆ ಒಂದು ವರ್ಷ ಕಳೆದಿದೆ. ಆದರೆ ದುರಂತದಲ್ಲಿ ಅಂಗಡಿಗಳು ನೆಲಸಮಗೊಂಡು ಸಾವಿರಾರೂ ರೂಗಳು ನಷ್ಟವಾಗಿತ್ತು. ಆದರೆ ಮಾಲೀರಿಗೆ ಇನ್ನು ಪರಿಹಾರ ಹಣ ನೀಡಿಲ್ಲ ಎಂದು ಆರೋಪಿಸಿದ್ದಾರೆ.

govt not given relief money to shop owners
ಇನ್ನು ಅಂಗಡಿ ಮಾಲೀಕರಿಗೆ ಸಿಗದ ಪರಿಹಾರ ಹಣ

By

Published : Mar 19, 2020, 2:28 PM IST

ಧಾರವಾಡ: ನಗರದ ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ದುರಂತದಲ್ಲಿ ಹಾನಿಗೊಳಗಾದ ಅಂಗಡಿ ಮಾಲೀಕರಿಗೆ ಸರ್ಕಾರ ಇನ್ನು ಪರಿಹಾರ ನೀಡಿಲ್ಲ ಎಂದು ಅಂಗಡಿ ಮಾಲೀಕರು ಆರೋಪಿಸಿದ್ದಾರೆ.

ಕಟ್ಟಡ ದುರಂತವಾಗಿ ಒಂದು ವರ್ಷವಾದರೂ ಅಂಗಡಿ ಮಾಲೀಕರಿಗೆ ಪರಿಹಾರ ಹಣ ಸಿಕ್ಕಿಲ್ಲ

ಮಾ. 19 ರಂದು ಇಲ್ಲಿನ ಕುಮಾರೇಶ್ವೇರ ನಗರದಲ್ಲಿ ಬೃಹತ್ ಕಟ್ಟಡ ಕುಸಿದು ರಾಜ್ಯದ್ಯಂತ ಸುದ್ದಿಯಾಗಿತ್ತು. ಈ ಕಟ್ಟಡದಲ್ಲಿ ಸಿಲುಕಿ 19 ಜನರು ಅಸುನೀಗಿದರು. ಆದರೆ ಅಗ್ನಿಶಾಮಕ ದಳ, ರಾಜ್ಯ ವಿಪತ್ತು ದಳ ಹಾಗೂ ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿ ಸೇರಿದಂತೆ ಪೊಲೀಸ್​ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿ ಕಟ್ಟಡದಲ್ಲಿ ಸಿಲುಕಿರೊ 57 ಜನರನ್ನು ರಕ್ಷಣೆ ಮಾಡಿದ್ದರು.

ಈ ಕಟ್ಟಡ ದುರಂದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರ 7 ಲಕ್ಷ ರೂ ಪರಿಹಾರ ಪರಿಹಾರ ಹಣ ನೀಡಿದೆ. ಆದರೆ ಕಟ್ಟಡದಲ್ಲಿ ಬಾಡಿಗೆ ಅಂಗಡಿಗಳನ್ನು ಪಡೆದುಕೊಂಡು ವ್ಯಾಪಾರ ಮಾಡುತ್ತಿದ್ದ ಮಾಲೀಕರಿಗೆ ಪರಿಹಾರ ನೀಡಿಲ್ಲ. ಕಟ್ಟಡದಲ್ಲಿರುವ ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ವಸ್ತುಗಳು ಹಾನಿಯಾಗಿದ್ದವು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಕಟ್ಟಡ ಮಾಲೀಕರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.

ಕಟ್ಟಡ ದುರಂತ ಹಿನ್ನೆಲೆ ಕಟ್ಟಡ 5 ಜನ ಮಾಲೀಕರು ಹಾಗೂ ಪಾಲಿಕೆ ಮೂರು ಜನ ಅಧಿಕಾರಿಗಳ ಮೇಲೆ‌ ಕೇಸ್ ದಾಖಲಾಗಿತ್ತು. ಆದ್ರೆ ವರ್ಷ ಕಳೆಯುತ್ತ ಬಂದ್ರು ಕಟ್ಟಡದಲ್ಲಿ‌ ಅಂಗಡಿ ಖರೀದಿಸಿದ ಮಾಲೀಕರಿಗೆ ಪರಿಹಾರ ನೀಡದಿರುವುದು ವಿಪರ್ಯಾಸವಾಗಿದೆ.

ABOUT THE AUTHOR

...view details