ಕರ್ನಾಟಕ

karnataka

ETV Bharat / state

ಧಾರವಾಡ ಕಟ್ಟಡ ಕುಸಿತ ಪ್ರಕರಣ: ನಾಲ್ವರಿಗೆ ಷರತ್ತುಬದ್ಧ ಜಾಮೀನು - undefined

ಬಹುಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಎಂಜಿನಿಯರ್ ಹೊರತುಪಡಿಸಿ ನಾಲ್ವರು ಮಾಲೀಕರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

ಧಾರವಾಡ ಕಟ್ಟಡ ಕುಸಿತ ಪ್ರಕರಣ

By

Published : Jul 17, 2019, 5:10 PM IST

ಧಾರವಾಡ: ಬಹುಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ನಾಲ್ವರು ಮಾಲೀಕರಿಗೆ ಧಾರವಾಡದ 3ನೇ ಹೆಚ್ಚುವರಿ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ.

ಕಟ್ಟಡದ ಎಂಜಿನಿಯರ್ ಹೊರತುಪಡಿಸಿ ಮಾಲೀಕರಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ಮಾ. 19ರಂದು ಕುಸಿದುಬಿದ್ದ ಕಟ್ಟಡದಡಿ ಸಿಲುಕಿ 19 ಜನ ಮೃತಪಟ್ಟಿದ್ದರು.

ಕಟ್ಟಡ ಕುಸಿದ ಎರಡು ದಿನಗಳ ನಂತರ ಮಾಲೀಕರು ಪೊಲೀಸರಿಗೆ ಶರಣಾಗಿದ್ದರು. ಗಂಗಣ್ಣ ಶಿಂತ್ರಿ, ಬಸವರಾಜ ನಿಗದಿ, ಮಹಾಬಲೇಶ್ವರ ಪುರದನಗುಡಿ, ರವಿ ಸಬರದ ಜಾಮೀನು ಪಡೆದ ಮಾಲೀಕರಾಗಿದ್ದಾರೆ. ಕಟ್ಟಡದ ನಾಲ್ವರು ಮಾಲೀಕರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ಕಟ್ಟಡದ ಎಂಜಿನಿಯರ್ ವಿವೇಕ ಪವಾರಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.


For All Latest Updates

TAGGED:

ABOUT THE AUTHOR

...view details