ಧಾರವಾಡ: ಆತ ಇನ್ನೂ 6ನೇ ತರಗತಿ, ಆದ್ರೆ ಜ್ಞಾನ ಮಾತ್ರ ಅಗಾಧ. ನಗರದ ಬಾಲಕನೋರ್ವ 1,100 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಫಟಾ ಫಟ್ ಉತ್ತರಿಸುವ ಮೂಲಕ ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ಮಾಡಿದ್ದಾನೆ.
ಸಮರ್ಥ ಮಹೇಶ್ ಪ್ರಸಾದ್ ಎಂಬಾತ ತನ್ನ ಅಗಾಧ ನೆನಪಿನ ಶಕ್ತಿಯಿಂದ ಬರೋಬ್ಬರಿ 1,100 ಜಿಕೆ ಪ್ರಶ್ನೆಗಳಿಗೆ ಉತ್ತರಿಸುವುದಷ್ಟೇ ಅಲ್ಲದೆ, 10 ನಿಮಿಷದಲ್ಲಿ 110 ಸಂಸ್ಕೃತ ಶ್ಲೋಕಗಳನ್ನು ಹೇಳುವ ಮೂಲಕ ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದ್ದಾನೆ.