ಧಾರವಾಡ: ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಧಾರವಾಡದ ಬಹುತೇಕ ಹೋಟೆಲ್ಗಳು ಇಂದಿನಿಂದ ಆರಂಭವಾಗಿವೆ.
ಧಾರವಾಡ: ಹೋಟೆಲ್, ಬಾರ್ & ರೆಸ್ಟೋರೆಂಟ್ ಕಾರ್ಯಾರಂಭ - ಧಾರವಾಡ ಲೇಟೆಸ್ಟ್ ನ್ಯೂಸ್
ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ತೆರಯಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಧಾರವಾಡ ನಗರದಲ್ಲಿ ಹೋಟೆಲ್ಗಳು ಇಂದಿನಿಂದ ಕಾರ್ಯಾರಂಭ ಮಾಡಿವೆ.

ಬಾರ್ & ರೆಸ್ಟೋರೆಂಟ್ ಕಾರ್ಯಾರಂಭ
ಹೋಟೆಲ್, ಬಾರ್ & ರೆಸ್ಟೋರೆಂಟ್ ಕಾರ್ಯಾರಂಭ
ಕಳೆದ ಐದಾರು ತಿಂಗಳಿನಿಂದ ಬಂದ್ ಆಗಿದ್ದ ಹೋಟೆಲ್ಗಳು ಇಂದಿನಿಂದ ಕಾರ್ಯಾರಂಭ ಮಾಡಿವೆ. ಸೆ. 1ರಿಂದ ಹೋಟೆಲ್ಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಆದ್ರೆ ಧಾರವಾಡ ಜಿಲ್ಲಾಡಳಿತ ಗಣೇಶ ನಿಮಜ್ಜನ ವೇಳೆ ಮದ್ಯ ಮಾರಾಟ ನಿಷೇಧ ಮಾಡಿತ್ತು. ಹೀಗಾಗಿ ನಿನ್ನೆ 11ನೇ ದಿನದ ಗಣೇಶ ನಿಮಜ್ಜನ ಕಾರ್ಯಕ್ರಮ ಇದ್ದಿದ್ದರಿಂದ ಬಾರ್ & ರೆಸ್ಟೋರೆಂಟ್ಗಳನ್ನು ಬಂದ್ ಮಾಡಲಾಗಿತ್ತು.
ಇಂದಿನಿಂದ ಬಾರ್ & ರೆಸ್ಟೋರೆಂಟ್ಗಳು ಕಾರ್ಯಾರಂಭ ಮಾಡಿವೆ. ಸರ್ಕಾರದ ಮಾರ್ಗಸೂಚಿಗಳಂತೆ ಕ್ರಮ ಕೈಗೊಂಡಿರುವ ಹೋಟೆಲ್ ಮಾಲೀಕರು, ಟೇಬಲ್, ಕುರ್ಚಿ ಹಾಗೂ ಇತರೆ ವಸ್ತುಗಳ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ.