ಧಾರವಾಡ: ಧಾರವಾಡದಲ್ಲಿ ನಡೆಯುವ ದಸರಾ ಜಂಬೂ ಸವಾರಿಗೆ ಈ ಬಾರಿಯೂ ದಸರಾ ಆನೆಗೆ ಅನುಮತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಲಾವಿದ ಮಂಜುನಾಥ ಹಿರೇಮಠ ಅವರು ಸ್ಕೂಟಿ ಮೇಲೆ ಆನೆಯ ಕಲಾಕೃತಿ ರಚನೆ ಮಾಡಿ ಗಮನ ಸೆಳೆದಿದ್ದಾರೆ.
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಸಲವೂ ಕೂಡ ಗಜರಾಜನಿಗೆ ಅನುಮತಿ ನೀಡಿಲ್ಲ. ಅಲ್ಲದೆ, ದಸರಾ ಜಂಬೂ ಸವಾರಿಯನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ.
ಸ್ಕೂಟಿಯಲ್ಲೇ ದಸರಾ ಆನೆ ರಚಿಸಿದ ಕಲಾವಿದ ಧಾರವಾಡದ ಗೌಳಿಗಲ್ಲಿ ಮಾರುತಿ ದೇವಸ್ಥಾನ ಮಂಡಳಿಯವರು ದಸರಾ ಉತ್ಸವ ಮಾಡಲು ಆನೆ ತರಲು ಪರವಾನಿಗಿ ಕೇಳಿದ್ದರು. ಆದರೆ ಅನುಮತಿ ಸಿಗದ ಕಾರಣ ಮಂಡಳಿಯವರು ಕಲಾವಿದ ಮಂಜುನಾಥ ಅವರಿಗೆ ಆನೆ ಮಾದರಿ ಸಿದ್ಧಪಡಿಸುವಂತೆ ಹೇಳಿದ್ದರು. ಹೀಗಾಗಿ ಮಂಜುನಾಥ ಅವರು, ತಮ್ಮ ಸ್ಕೂಟಿಯಲ್ಲೇ ಆನೆ ರಚಿಸಿ ದಸರಾ ಉತ್ಸವಕ್ಕೆ ಸಿದ್ಧಗೊಳಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಕಳೆದ ವರ್ಷ ಕೂಡ ಅವರು ದಸರಾ ಉತ್ಸವಕ್ಕೆ ತಮ್ಮ ಓಮಿನಿ ಕಾರಿನಲ್ಲಿ ಆನೆಯ ಆಕೃತಿ ಮಾಡಿದ್ದರು.
ಇದನ್ನೂ ಓದಿ:IPL 2021 Final: ಚಾಂಪಿಯನ್ ಪಟ್ಟಕ್ಕಾಗಿ ದುಬೈನಲ್ಲಿ ಸೂಪರ್ ಕಿಂಗ್ಸ್- ನೈಟ್ ರೈಡರ್ಸ್ ಕಾದಾಟ